ಡಾ. ಮಹದೇವಪ್ಪ ಅವರಿಗೆ ಡಿಸಿಎಂ ಸ್ಥಾನ ನೀಡಿ

  ಗುಂಡ್ಲುಪೇಟೆಯಲ್ಲಿ ಡಾ.ಎಚ್.ಸಿ.ಮಹದೇವಪ್ಪ ಅಭಿಮಾನಿಗಳು ಪ್ರತಿಭಟನಾ ಮೆರವಣಿಗೆ ನಡೆಸಿದರು. ಮುಖಂಡರಾದ ಹೊರೆಯಾಲ ಕರಿಯಯ್ಯ , ಕಬ್ಬಳ್ಳಿ ನಂಜುಂಡಸ್ವಾಮಿ, ರಾಘವಾಪುರ ಮಹೇಶ್, ಪುರಸಭಾ ಮಾಜಿ ಸದಸ್ಯ ಮಲ್ಲರಾಜು ಇದ್ದರು.
ಗುಂಡ್ಲುಪೇಟೆಯಲ್ಲಿ ಡಾ.ಎಚ್.ಸಿ.ಮಹದೇವಪ್ಪ ಅಭಿಮಾನಿಗಳು ಪ್ರತಿಭಟನಾ ಮೆರವಣಿಗೆ ನಡೆಸಿದರು. ಮುಖಂಡರಾದ ಹೊರೆಯಾಲ ಕರಿಯಯ್ಯ , ಕಬ್ಬಳ್ಳಿ ನಂಜುಂಡಸ್ವಾಮಿ, ರಾಘವಾಪುರ ಮಹೇಶ್, ಪುರಸಭಾ ಮಾಜಿ ಸದಸ್ಯ ಮಲ್ಲರಾಜು ಇದ್ದರು.
Published on
ಗುಂಡ್ಲುಪೇಟೆ : ಡಿ.ಕೆ.ಶಿವಕುಮಾರ್ ಸಚಿವ ಸಂಪುಟದಲ್ಲಿ ಡಾ.ಎಚ್.ಸಿ. ಮಹದೇವಪ್ಪ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಒತ್ತಾಯಿಸಿ ಮಹದೇವಪ್ಪ ಅಭಿಮಾನಿ ಬಳಗದವರು ಭಾನುವಾರ ಮೆರವಣಿಗೆ ನಡೆಸಿದರು.
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ, ಚಾಮರಾಜನಗರ ಲೋಕಸಭಾ ಕ್ಷೇತ್ರ ಸೇರಿದಂತೆ ಹಳೆಯ ಮೈಸೂರು ಭಾಗದಲ್ಲಿ ದಲಿತ ಸಮುದಾಯದ ಮತಗಳು ಕಾಂಗ್ರೆಸ್‌ಗೆ ಬರಲು ಮಹದೇವಪ್ಪ ಕಾರಣಕರ್ತ ರಾಗಿದ್ದಾರೆ.ಇವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಮುಖಂಡರು ಒತ್ತಾಯಿಸಿದರು.
ಈ ಸಂದರ್ಭ ಮಹದೇವಪ್ಪ ಅವರ ಭಾವಚಿತ್ರ ಹಿಡಿದು ಜೈಕಾರದ ಘೋಷಣೆಗಳನ್ನು ಮೊಳಗಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಕೆ.ಬೊಮ್ಮಯ್ಯ, ಮುಖಂಡರಾದ ಹೊರೆಯಾಲ ಕರಿಯಯ್ಯ , ಕಬ್ಬಳ್ಳಿ ನಂಜುಂಡಸ್ವಾಮಿ, ರಾಘವಾಪುರ ಮಹೇಶ್, ಪುರಸಭಾ ಮಾಜಿ ಸದಸ್ಯ ಮಲ್ಲರಾಜು, ಸೋಮಣ್ಣ, ಮುತ್ತಣ್ಣ, ಹಿರಿಕಾಟಿ ಶಿವು, ಕೆಂಪರಾಜು ಹೆಗ್ಗಡಹಳ್ಳಿ, ಕಬ್ಬಳ್ಳಿ ಮಹದೇವು, ರಾಜೇಂದ್ರ, ಮುರಳಿ ಸೋಮಳ್ಳಿ ಇತರರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net