ಗೌಡಹಳ್ಳಿ ಬಿಆರ್‌ಟಿ ಹುಲಿ ರಕ್ಷಿತ ಅರಣ್ಯ ಪ್ರದೇಶದ ಕಾಡಂಚಿನ ಗ್ರಾಮವಾಗಿದ್ದು, ಸಿದ್ದೇಗೌಡ ಮನೆಯ ಹಿಂದೆ ಇರುವ ಕೊಟ್ಟಿಗೆಯಲ್ಲಿ ಹಸು, ಕರು ಹಾಗೂ ಮೇಕೆಯನ್ನು ಕಟ್ಟಿದ್ದರು. ತಡರಾತ್ರಿ ಕೊಟ್ಟಿಗೆಗೆ ದಾಳಿ ಇಟ್ಟ ಚಿರತೆ ಎರಡು ಕರುಗಳ ಮೇಲೆ ದಾಳಿ ನಡೆಸಿದೆ. ಮೇಕೆಯನ್ನು ಕೊಂದು ಹೊತ್ತುಯ್ದು ದೂರದ ಜಮೀನಿನಲ್ಲಿ ಅರ್ಧಂಬರ್ಧ ತಿಂದು ಹಾಕಿದೆ.