ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ

ಕೊಳ್ಳೇಗಾಲ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ  ಭಾನುವಾರ ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಡಾ.ನವೀನ್‌ಮೌರ್ಯ ಮಾಲಾರ್ಪಣೆ ಮಾಡಿದರು. ಎಸ್.ಸಿದ್ದಪ್ಪಾಜಿ, ರೇವಣ್ಣ, ಕೆ.ಕೆ ಮೂರ್ತಿ, ನಟರಾಜು, ಬಸವರಾಜು ಇತರರು ಇದ್ದರು.
ಕೊಳ್ಳೇಗಾಲ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಭಾನುವಾರ ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಡಾ.ನವೀನ್‌ಮೌರ್ಯ ಮಾಲಾರ್ಪಣೆ ಮಾಡಿದರು. ಎಸ್.ಸಿದ್ದಪ್ಪಾಜಿ, ರೇವಣ್ಣ, ಕೆ.ಕೆ ಮೂರ್ತಿ, ನಟರಾಜು, ಬಸವರಾಜು ಇತರರು ಇದ್ದರು.
Published on
ಕೊಳ್ಳೇಗಾಲ: ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಭಾನುವಾರ ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಡಾ.ನವೀನ್‌ಮೌರ್ಯ ಮಾಲಾರ್ಪಣೆ ಮಾಡಿದರು.
ಬಳಿಕ ಮಾತನಾಡಿದ ಅವರು, ಮೂರು ದಿನಗಳವರೆಗೆ ಬಿಜೆಪಿ ಎಸ್ಸಿ ಮೋರ್ಚಾ ಘಟಕದ ವತಿಯಿಂದ ಜಿಲ್ಲೆಯ ಪ್ರವಾಸ ಕೈಗೊಂಡಿದ್ದೇವೆ. ಜಿಲ್ಲೆಯಲ್ಲಿ 8 ಮಂಡಲಗಳಿದ್ದು ಎಲ್ಲ ಕಡೆ ಇಲ್ಲಿರುವ ದಲಿತರನ್ನು ಸಮುದಾಯವನ್ನು ಸಂಘಟಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಟಗರಪುರ ರೇವಣ್ಣ, ಕೊಳ್ಳೇಗಾಲ ತಾಲೂಕು ಘಟಕದ ಬಿಜೆಪಿ ಎಸ್ಸಿ ಮೋರ್ಚಾ ಎಸ್.ಸಿದ್ದಪ್ಪಾಜಿ, ಒಬಿಸಿ ಮೋರ್ಚ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೋಮಣ್ಣ ಉಪ್ಪಾರ್, ಬಿಜೆಪಿ ಎಸ್ಸಿ ಮೋರ್ಚಾ ಗ್ರಾಮಾಂತರ ಕಾರ್ಯದರ್ಶಿ ಮುಳ್ಳೂರು ಪ್ರಭು, ಬಸವರಾಜು (ದ್ವಾರಕಿ), ನಗರಸಭೆ ನಾಮನಿರ್ದೇಶಿತ ಸದಸ್ಯ ನಟರಾಜು, ಮುಖಂಡರಾದ ಕೆ.ಕೆ ಮೂರ್ತಿ ಮತ್ತಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net