ಕೊಳ್ಳೇಗಾಲದಲ್ಲಿ ಗಣೇಶಮೂರ್ತಿ ಮೆರವಣಿಗೆ

ಕೊಳ್ಳೇಗಾಲ ಪಟ್ಟಣದ ಸಂಕಷ್ಟಹರ ಗಣಪತಿ ದೇವಾಲಯ ಆವರಣದಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯ ಸಮಾಜ ವತಿಯಿಂದ ಎರಡನೇ ವರ್ಷದ ಗಣೇಶೋತ್ಸವ ಪ್ರಯುಕ್ತ ಪ್ರತಿಷ್ಠಾಪಿಸಿದ್ದ ಗಣಪತಿಯನ್ನು ಬುಧವಾರ ಮೆರವಣಿಗೆ ನಡೆಸಿ ವಿಸರ್ಜಿಸಲಾಯಿತು.
ಕೊಳ್ಳೇಗಾಲ ಪಟ್ಟಣದ ಸಂಕಷ್ಟಹರ ಗಣಪತಿ ದೇವಾಲಯ ಆವರಣದಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯ ಸಮಾಜ ವತಿಯಿಂದ ಎರಡನೇ ವರ್ಷದ ಗಣೇಶೋತ್ಸವ ಪ್ರಯುಕ್ತ ಪ್ರತಿಷ್ಠಾಪಿಸಿದ್ದ ಗಣಪತಿಯನ್ನು ಬುಧವಾರ ಮೆರವಣಿಗೆ ನಡೆಸಿ ವಿಸರ್ಜಿಸಲಾಯಿತು.
Published on
ಕೊಳ್ಳೇಗಾಲ: ಪಟ್ಟಣದ ಸಂಕಷ್ಟಹರ ಗಣಪತಿ ದೇವಾಲಯ ಆವರಣದಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯ ಸಮಾಜ ವತಿಯಿಂದ ಎರಡನೇ ವರ್ಷದ ಗಣೇಶೋತ್ಸವ ಪ್ರಯುಕ್ತ ಪ್ರತಿಷ್ಠಾಪಿಸಿದ್ದ ಗಣಪತಿಯನ್ನು ಬುಧವಾರ ವಿಸರ್ಜಿಸಲಾಯಿತು.
ಪಟ್ಟಣದ ಪ್ರಮುಖ ರಸ್ತೆಗಳಾದ ಬಸ್ತೀಪುರ ರಸ್ತೆ, ಎಂಜಿಎಸ್‌ವಿ ವೃತ್ತ, ಡಾ.ರಾಜ್‌ಕುಮಾರ್ ರಸ್ತೆ, ಶ್ರೀ ಕನ್ನಿಕಾಪರಮೇಶ್ವರಿ, ಶ್ರೀನಾರಾಯಣಸ್ವಾಮಿ ಗುಡಿ ಬೀದಿ, ಕಾವೇರಿ ರಸ್ತೆಯಲ್ಲಿ ಮಂಗಳವಾದ್ಯ ಸಮ್ಮೇಳನದಲ್ಲಿ ಗಣಪತಿ ಮೆರವಣಿಗೆ ಮಾಡಿ ದಾಸನಪುರದ ಕಾವೇರಿ ನದಿಯಲ್ಲಿ ವಿಸರ್ಜನೆ ಮಾಡಲಾಯಿತು. ಬಳಿಕ, ನೆರೆದಿದ್ದ ಸಾರ್ವಜನಿಕರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.
ಶ್ರೀ ಜಗದ್ಗುರು ಪಂಚಾಚಾರ್ಯ ಟ್ರಸ್ಟ್ ಅಧ್ಯಕ್ಷ ಅಧ್ಯಕ್ಷ ಶ್ರೀನಿಧಿ ಮಹೇಶ್, ಗೌರವಾಧ್ಯಕ್ಷ ನಟರಾಜಪ್ಪ, ಕಾರ್ಯದರ್ಶಿ ಚೇತನ್, ಖಜಾಂಚಿ ಕಾಮಾಕ್ಷಿ ಪ್ರಕಾಶ್, ಪಿಜಿಎಂ ಚಂದ್ರು, ಉಪಾಧ್ಯಕ್ಷ ಎಂ.ಎಸ್.ಮಂಜು, ಪ್ರಕಾಶ್, ಕಾರ್ತಿಕ್ , ಸಂತೋಷ್, ಚಂದ್ರು ಕುಣಗಳ್ಳಿ, ಪಶುಪತಿ, ಪಾಲಾಕ್ಷ, ಅಕ್ಕನ ಬಳಗ ಅಧ್ಯಕ್ಷೆ ಜಗದಾಂಬಾ, ವಿಜಯ ಚಂಪಕಮಾಲಾ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net