ಮೂರು ದಿನದ ಹಿಂದೆ ಗ್ರಾಮದ ಮಹೇಶ್ ಎಂಬುವರ ಜಮೀನಿನಲ್ಲಿದ್ದ ಹಸುವಿನ ಮೇಲೆ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ ಹುಲಿ ಹಸುವನ್ನು ಕೊಂದುಹಾಕಿದ್ದ ಹುಲಿ ಚಲನವಲನ ಪತ್ತೆಗೆ ಅರಣ್ಯ ಇಲಾಖೆ ಕಳೇಬರದ ಸಮೀಪದಲ್ಲಿ ಕ್ಯಾಮರಾ ಅಳವಡಿಸಿ ಸಿಬ್ಬಂದಿ ಕಾವಲಿಗೆ ನಿಯೋಜಿಸಿತ್ತು. ಎರಡು ದಿನಗಳಿಂದಲೂ ಅತ್ತ ಸುಳಿಯದ ಹುಲಿ ಮಂಗಳವಾರ ತಡರಾತ್ರಿ ಆಗಮಿಸಿ ಹಸುವಿನ ಕಳೇಬರವನ್ನು ಎಳೆದೊಯ್ದಿರುವ ಚಿತ್ರಗಳು ಕ್ಯಾಮರಾದಲ್ಲಿ ಸೆರೆಯಾಗಿದ್ದು ಇದನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಮುಂದಾಗಿದೆ.