ಬುಡಕಟ್ಟು ಮಹಿಳೆಯರಿಗೆ ಅರಣ್ಯ ಇಲಾಖೆ ನೆರವು

ಗುಂಡ್ಲುಪೇಟೆ ತಾಲೂಕಿನ ಮದ್ದೂರು ಕಾಲನಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅರಣ್ಯವಾಸಿ ಬುಡಕಟ್ಟು ಸಮುದಾಯದ ಮಹಿಳೆಯರಿಗೆ ಪ್ರಮಾಣಪತ್ರ ವಿತರಣೆ ಮಾಡಲಾಯಿತು. ಎಸ್.ಪ್ರಭಾಕರನ್, ಪುನೀತ್ ಕುಮಾರ್, ರವಿ, ಡಾ.ರತ್ನಮ್ಮ ಇದ್ದರು.
ಗುಂಡ್ಲುಪೇಟೆ ತಾಲೂಕಿನ ಮದ್ದೂರು ಕಾಲನಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅರಣ್ಯವಾಸಿ ಬುಡಕಟ್ಟು ಸಮುದಾಯದ ಮಹಿಳೆಯರಿಗೆ ಪ್ರಮಾಣಪತ್ರ ವಿತರಣೆ ಮಾಡಲಾಯಿತು. ಎಸ್.ಪ್ರಭಾಕರನ್, ಪುನೀತ್ ಕುಮಾರ್, ರವಿ, ಡಾ.ರತ್ನಮ್ಮ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬಂಡೀಪುರ ಹುಲಿಯೋಜನೆಯ ಕ್ಷೇತ್ರ ನಿರ್ದೇಶಕ ಎಸ್.ಪ್ರಭಾಕರನ್
  • ಮದ್ದೂರು ಕಾಲನಿ
ಗುಂಡ್ಲುಪೇಟೆ: ಕಾಡಂಚಿನ ಬುಡಕಟ್ಟು ಜನಾಂಗದ ಮಹಿಳೆಯರ ಸ್ವಾವಲಂಬನೆಗೆ ಅರಣ್ಯ ಇಲಾಖೆ ಹೆಚ್ಚಿನ ನೆರವು ನೀಡುತ್ತಿದೆ ಎಂದು ಬಂಡೀಪುರ ಹುಲಿಯೋಜನೆಯ ಕ್ಷೇತ್ರ ನಿರ್ದೇಶಕ ಎಸ್.ಪ್ರಭಾಕರನ್ ಹೇಳಿದರು.
ತಾಲೂಕಿನ ಮದ್ದೂರು ಕಾಲನಿಯಲ್ಲಿ ಅರಣ್ಯ ಇಲಾಖೆ ಮತ್ತು ಶ್ರೀ ಸಾಯಿ ಗಿರಿಜನ ಪ್ರಗತಿ ಫೌಂಡೇಷನ್ ವತಿಯಿಂದ ಅರಣ್ಯವಾಸಿ ಬುಡಕಟ್ಟು ಸಮುದಾಯದ ಮಹಿಳೆಯರಿಗೆ ಆಯೋಜಿಸಿದ್ದ ಹೊಲಿಗೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅರಣ್ಯ ಇಲಾಖೆಯು ಸ್ಥಳೀಯ ಸಂಸ್ಥೆ ಅಥವಾ ಸ್ವಯಂಸೇವಾ ಸಂಸ್ಥೆಗಳ ನೆರವಿನೊಂದಿಗೆ ಬುಡಕಟ್ಟು ಜನಾಂಗದ ಮಹಿಳೆಯರಿಗೆ ಉಚಿತವಾಗಿ 3 ತಿಂಗಳ ಹೊಲಿಗೆ ತರಬೇತಿ ಕೊಡಿಸುವ ಜತೆಗೆ ತರಬೇತಿ ಪಡೆದ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನೂ ಸಹಾ ವಿತರಿಸುತ್ತಿದೆ. ಬುಡಕಟ್ಟು ಜನರು ಇದರ ಸದುಪಯೋಗ ಪಡೆದು ತರಬೇತಿಯ ನಂತರ ಸ್ವಂತ ಹೊಲಿಗೆ ವ್ಯವಹಾರವನ್ನು ಪ್ರಾರಂಭಿಸಿ ತಮ್ಮ ಬದುಕು ಕಟ್ಟಿಕೊಳ್ಳಬಹುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ತರಭೇತಿ ಪೂರ್ಣಗೊಳಿಸಿದ ಮಹಿಳೆಯರಿಗೆ ಪ್ರಮಾಣಪತ್ರ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮದ್ದೂರು ವಲಯಾರಣ್ಯಾಧಿಕಾರಿ ಪುನೀತ್ ಕುಮಾರ, ಫಾರೆಸ್ಟರ್ ರವಿ, ಶ್ರೀ ಸಾಯಿ ಗಿರಿಜನ ಪ್ರಗತಿ ಪೌಂಡೇಶನ್‌ನ ಅಧ್ಯಕ್ಷೆ ಡಾ.ಎಸ್. ರತ್ನಮ್ಮ, ಕಾರ್ಯದರ್ಶಿ ದೊಡ್ಡಯ್ಯ ಇತರರಿದ್ದರು.
ಫೋಟೋ: 02-ಏ-ಜಿಪಿಟಿ-1
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net