ಪಟ್ಟಣದ ಬಸ್ ನಿಲ್ದಾಣ ಸಮೀಪವಿರುವ ಶ್ರೀನಿಧಿ ಉಪಚಾರ್ ಹೋಟೆಲ್‌ಗೆ ತೆರಳಿದ್ದ ಅಧಿಕಾರಿಗಳು, ಸ್ಟೋರ್ ರೂಂನಲ್ಲಿ ಪರಿಶೀಲಿಸಿದರು. ಬಳಿಕ ಅರಿಶಿಣ, ಧನೀಯಪುಡಿ, ಕಾರದ ಪುಡಿ, ಉಪ್ಪು, ನೀರು ಸೇರಿದಂತೆ ಇನ್ನಿತರ ಪದಾರ್ಥಗಳನ್ನು ಸಂಚಾರ ಆಹಾರ ಪ್ರಯೋಗಾಲಯದಲ್ಲಿ ಫುಡ್ ಅನಾಲಿಸ್ಟ್ ಕಿಶೋರ್, ಪ್ರಯೋಗಾಲಯ ಸಹಾಯಕ ಧರಣೇಶ್ ಅವರು ಗುಣಮಟ್ಟತೆ ಮತ್ತು ಸುರಕ್ಷತೆಯನ್ನು ಪರಿಶೀಲಿಸಿದರು. ಈ ವೇಳೆ ಎಸಿ ದಿನೇಶ್ ಕುಮಾರ್ ಮೀನಾ ಅವರು ಸ್ಥಳದಲ್ಲಿದ್ದ ಹೋಟೆಲ್ ಮಾಲೀಕರಿಗೆ ಅಡುಗೆ ತಯಾರಿಸುವ ಕೊಠಡಿಯಲ್ಲಿ ಅಶುಚಿತ್ವವಿದ್ದು ಸ್ವಚ್ಛತೆಯನ್ನು ಕಾಪಾಡಿಕೊಳ್ಳುವಂತೆ ಸೂಚನೆ ನೀಡಿದರು.