ಇದನ್ನು ಪ್ರಾಯೋಗಿಕವಾಗಿ 2003 ರ ಮುಂಗಾರು ಹಂಗಾಮಿನಿಂದ ಜಾರಿಗೆ ತರಲಾಗಿದ್ದು ಆಂಧ್ರ ಪ್ರದೇಶ, ಛತ್ತೀಸ್‌ಗಡ, ಹರಿಯಾಣ, ಕರ್ನಾಟಕ, ಮಧ್ಯಪ್ರದೇಶ, ಮಹರಾಷ್ಟ್ರ, ಪಂಜಾಬ್, ರಾಜಸ್ತಾನ ರಾಜ್ಯಗಳು ಜಾರಿಗೆ ತಂದಿವೆ. ಈ ಯೋಜನೆಯಡಿ ಮಹಾರಾಷ್ಟ್ರದ ಜಾಲಗಾಂವ್ ಜಿಲ್ಲೆಯಲ್ಲಿ ಒಂದು ಹೆಕ್ಟೇರ್ ಬಾಳೆಗೆ ವಾರ್ಷಿಕ 8 ಸಾವಿರ ರೂ. ವಿಮೆ ಮೊತ್ತ ಕಟ್ಟಿ 1 ಲಕ್ಷ 70 ಸಾವಿರ ರೂ.ವರೆಗೆ ಬೆಳೆ ವಿಮೆ ಮಾಡಿಸಲಾಗುತ್ತದೆ. ಹವಾಮಾನ ವೈಪರೀತ್ಯದಿಂದ ರೈತರು ನಷ್ಟ ಹೊಂದಿದ ಸಂದರ್ಭದಲ್ಲಿ ಸುಮಾರು 90 ಸಾವಿರ ಬೆಳೆ ಪರಿಹಾರ ಹಾನಿಗೊಳಗಾದ ಫಲಾನುಭವಿ ರೈತರ ಖಾತೆಗೆ ಜಮೆಯಾಗುತ್ತದೆ.