ಪೊನ್ನಾಚಿ ಶ್ರೀ ವೀರೇಶ್ವರ ತಂಡಕ್ಕೆ ಪ್ರಥಮ ಸ್ಥಾನ

ಮರೂರಿನಲ್ಲಿ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪೊನ್ನಾಚಿ ವಿರೇಶ್ವರ ತಂಡ ಪ್ರಥಮ ಸ್ಥಾನ ಪಡೆದಿದೆ.
ಮರೂರಿನಲ್ಲಿ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪೊನ್ನಾಚಿ ವಿರೇಶ್ವರ ತಂಡ ಪ್ರಥಮ ಸ್ಥಾನ ಪಡೆದಿದೆ.
Published on

ಪ್ರಮುಖ ಮುಖ್ಯಾಂಶಗಳು

  • ಕಬ್ಬಾಳಮ್ಮ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಕ್ರಿಕೆಟ್ ಪಂದ್ಯ
ಹನೂರು: ತಾಲೂಕಿನ ಪೊನ್ನಾಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರೂರಿನಲ್ಲಿ ಕಬ್ಬಾಳಮ್ಮ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಆಯೋಜಿಸಿದ್ಧ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪೊನ್ನಾಚಿ ಶ್ರೀ ವೀರೇಶ್ವರ ತಂಡ ಗೆಲುವು ಸಾಧಿಸಿದೆ.
ಪಂದ್ಯಾವಳಿಯಲ್ಲಿ ಮರೂರು ಸೇರಿದಂತೆ ಪೊನ್ನಾಚಿ ಅಸ್ತೂರು, ದಂಟಳ್ಳಿ, ಕೋಣನಕೆರೆ, ರಾಮೇಗೌಡನಹಳ್ಳಿ, ಚಿಕ್ಕ ಮರೂರು, ಹಾಗೂ ಜಯಮ್ಮನ ದೊಡ್ಡಿಯಿಂದ 9 ತಂಡಗಳು ಭಾಗವಹಿಸಿದ್ದವು. ಫೈನಲ್ ಪಂದ್ಯದಲ್ಲಿ ರಾಮೇಗೌಡನಹಳ್ಳಿ ಹಾಗೂ ಪೊನ್ನಾಚಿ ಶ್ರೀ ವೀರೇಶ್ವರ ತಂಡಗಳು ಸೆಣಸಾಟ ನಡೆಸಿದವು. 5 ಓವರ್‌ಗೆ ನಿಗಧಿಪಡಿಸಿದ್ದ ಈ ಪಂದ್ಯದಲ್ಲಿ ರಾಮೇಗೌಡನಹಳ್ಳಿ ತಂಡ 6 ವಿಕೆಟ್‌ಗೆ 28 ರನ್ ಪಡೆದರೆ, ಶ್ರೀ ವೀರೇಶ್ವರ ತಂಡ 4 ವಿಕೆಟ್‌ಗೆ 29 ರನ್ ಗಳಿಸುವುದರ ಮೂಲಕ ಪ್ರಥಮ ಸ್ಥಾನ ಪಡೆಯಿತು. ಪ್ರಥಮ ಹಾಗೂ ದ್ವಿತೀಯ ಬಹುಮಾನವಾಗಿ ಆಕರ್ಷಕ ಟ್ರೋಪಿ ಹಾಗೂ ನಗದನ್ನು ವಿತರಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net