ಗ್ರಾಮದ ಚಂಗುಮಣಿ ಅವರು ಚನ್ನಾಲಿಂಗನಹಳ್ಳಿಗೆ ತೆರಳುವ ಮಾರ್ಗದಲ್ಲಿ ಜಮೀನು ಹೊಂದಿದ್ದು, ಇಲ್ಲಿ ಹಾದು ಹೋಗಿರುವ ವಿದ್ಯುತ್ ಮಾರ್ಗದ ತಂತಿಯಲ್ಲಿ ಮಧ್ಯಾಹ್ನ 2ರ ವೇಳೆಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡು ಜ್ವಾಲೆ ವ್ಯಾಪಿಸಿದೆ. ಇದರಿಂದ ಸುಮಾರು 500ಕ್ಕೂ ಹೆಚ್ಚು ಬಾಳೆ ಗಿಡಗಳು, 8 ತೆಂಗಿನ ಮರ ಹಾಗೂ 4 ಅಡಿಕೆ ಮರಗಳು ನಾಶವಾಗಿದೆ. ಬೆಂಕಿಯ ಜ್ವಾಲೆ ವ್ಯಾಪಿಸುತ್ತಿದ್ದಂತೆ ರೈತ ಚಂಗುಮಣಿ ಅವರು ಮಾಹಿತಿ ತಿಳಿಸಲಾಗಿ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸುವುದರ ಮೂಲಕ ಮುಂದಾಗುವ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.