ಚಾಮರಾಜನಗರ: ತಾಲೂಕಿನ ಹೆಬ್ಬಸೂರು ಸಮೀಪ ಕಬ್ಬಿನ ಗದ್ದೆಗೆ ಬೆಂಕಿ ತಗುಲಿ ಸುಮಾರು 2 ಎಕರೆ ಕಬ್ಬು ನಾಶವಾಗಿದೆ.
ಗ್ರಾಮದ ನಿವಾಸಿಗಳಾದ ಮಹದೇವಯ್ಯ ಮತ್ತು ಬಸವಣ್ಣ ಅವರ ಕಬ್ಬಿನ ಗದ್ದೆಯ ಸಮೀಪದಲ್ಲೇ ಇರುವ ವಿದ್ಯುತ್ ಕಂಬದಿಂದ ಬೆಂಕಿ ತಗುಲಿದ ಪರಿಣಾಮ ಸುಮಾರು 2 ಎಕರೆ ಕಬ್ಬು ಬೆಂಕಿಗೆ ಆಹುತಿಯಾಗಿದೆ. ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದು ಮುಂದಾಗುವ ಅನಾಹುತ ತಪ್ಪಿಸಿದರು.
ನಂತರ ಕೃಷಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.