ಸರ್ಕಲ್ ಇನ್‌ಸ್ಪೆಕ್ಟರ್ ಕಚೇರಿಯಲ್ಲಿ ಬೆಂಕಿ ಅವಘಡ

ಕೊಳ್ಳೇಗಾಲದಲ್ಲಿರುವ ಸರ್ಕಲ್ ಇನ್‌ಸ್ಪೆಕ್ಟರ್ ಕಚೇರಿಯಲ್ಲಿ ಪರಿಕರಗಳು ಸುಟ್ಟು ಹೋಗಿರುವುದನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜು ವೀಕ್ಷಿಸಿದರು.
ಕೊಳ್ಳೇಗಾಲದಲ್ಲಿರುವ ಸರ್ಕಲ್ ಇನ್‌ಸ್ಪೆಕ್ಟರ್ ಕಚೇರಿಯಲ್ಲಿ ಪರಿಕರಗಳು ಸುಟ್ಟು ಹೋಗಿರುವುದನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜು ವೀಕ್ಷಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ವಿದ್ಯುತ್ ಶಾರ್ಟ್‌ಸರ್ಕ್ಯೂಟ್‌
  • ಸರ್ಕಲ್ ಇನ್‌ಸ್ಪೆಕ್ಟರ್ ಕಚೇರಿಯಲ್ಲಿ ಬೆಂಕಿ
ಕೊಳ್ಳೇಗಾಲ: ವಿದ್ಯುತ್ ಶಾರ್ಟ್‌ಸರ್ಕ್ಯೂಟ್‌ನಿಂದಾಗಿ ಮಂಗಳವಾರ ಪಟ್ಟಣದಲ್ಲಿರುವ ಸರ್ಕಲ್ ಇನ್‌ಸ್ಪೆಕ್ಟರ್ ಕಚೇರಿಯಲ್ಲಿ ಬೆಂಕಿ ಕಾಣಿಸಿಕೊಂಡು ಕಚೇರಿಯಲ್ಲಿನ ಪರಿಕರಗಳು ಸುಟ್ಟು ಹೋಗಿವೆ.
ಬೆಳಗ್ಗೆ ಕಚೇರಿಯಲ್ಲಿ ಬೆಂಕಿ ಉರಿಯುವುದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಬಳಿಕ ಅಗ್ನಿಶಾಮಕ ದಳ ಸಿಬ್ಬಂದಿ ಬಂದು ಬೆಂಕಿ ಆರಿಸಿದರು. ಈ ಬಗ್ಗೆ ಸಿಪಿಐ ಶಿವಮಾದಯ್ಯ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬೆಂಕಿ ಅವಘಡದಿಂದ ಕಂಪ್ಯೂಟರ್, ಜೆರಾಕ್ಸ್ ಪ್ರಿಂಟರ್ ಮಿಷನ್, ಸೀಲಿಂಗ್ ಫ್ಯಾನ್, ಟೆಲಿಫೋನ್ ಇತರ ಪೀಠೋಪಕರಣಗಳು ಸುಟ್ಟು ಕರುಕಲಾಗಿದೆ. ಕೆಲವು ದಾಖಲೆ ಪತ್ರಗಳೂ ಹಾನಿಗೊಳದಾಗಿವೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜ್ ಭೇಟಿ ನೀಡಿ ಪರಿಶೀಲಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟನೆಯಲ್ಲಿ ಕಂಪ್ಯೂಟರ್, ಫ್ರಿಂಟರ್, ಜೆರಾಕ್ಸ್ ಮಷಿನ್, ಟೇಬಲ್ಗಳು ಸುಟ್ಟು ಹೋಗಿದ್ದು, ಹೆಚ್ಚಿನ ಅನಾಹುತ ಸಂಭವಿಸಿಲ್ಲ ಎಂದರು.
ಡಿವೈಎಸ್ಪಿ ಧರ್ಮೇಂದ್ರ, ವೃತ್ತ ನಿರೀಕ್ಷಕ ಶಿವಮಾದಯ್ಯ, ಎಸ್‌ಐ ವರ್ಷಾ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net