ಇದೇ ವೇಳೆ ಪರಿಷತ್ತಿನ ತಾಲೂಕು ಅಧ್ಯಕ್ಷ ಸುರೇಶ್ ಋಗ್ವೇದಿ ಮಾತನಾಡಿ, ಸರಳರು, ಸಜ್ಜನರು ಆದ ಚಂದ್ರು ಡಾ.ರಾಜಕುಮಾರ್ ಅವರ ಒಡನಾಡಿ. ರಾಜಕುಮಾರ ಅವರ ಸ್ನೇಹದಿಂದ ಹಲವಾರು ಚಿತ್ರಗಳಲ್ಲಿ ನಟಿಸಿ ಜನ ಮೆಚ್ಚುಗೆ ಗಳಿಸಿದ್ದಾರೆ ಎಂದರು. ಪರಿಷತ್ತಿನ ನಿರ್ದೇಶಕ ರವಿಚಂದ್ರಪ್ರಸಾದ್ ಮಾತನಾಡಿ, ಚಂದ್ರಣ್ಣ ಇಳಿ ವಯಸ್ಸಿನಲ್ಲಿ ನಮ್ಮೊಂದಿಗೆ ಇರುವುದು ಪುಣ್ಯವೆಂದು ತಿಳಿಸಿದರು. ರಂಗ ಕಲಾವಿದ ಮಾಂಬಳ್ಳಿ ಅರುಣ್‌ಕುಮಾರ್, ಬರಹಗಾರ ಎಸ್.ಲಕ್ಷ್ಮೀನರಸಿಂಹ, ಸಮಾಜ ಸೇವಕ ಎಲ್.ಸುರೇಶ್ ಇದ್ದರು.