ಬೋಧಗಯಾ ಬೌದ್ಧರಿಗೆ ಬಿಡುವವರೆಗೂ ಹೋರಾಟ

ಚಾಮರಾಜನಗರದ ರೈಲ್ವೆ ನಿಲ್ದಾಣದಿಂದ ಬೌದ್ಧ ಉಪಾಸಕರು ದೆಹಲಿ ಚಲೋನಲ್ಲಿ ಭಾಗವಹಿಸಲು ತೆರಳಿದರು. ಸಿ.ಎಂ.ಕೃಷ್ಣಮೂರ್ತಿ, ಸಿದ್ದರಾಜು, ದಡದಹಳ್ಳಿ ಶಂಕರ್, ಸಿದ್ದರಾಜು, ಬಂಗಾರಸ್ವಾಮಿ, ನಾಗೇಶ್, ಎಂ.ಪುರುಷೋತ್ತಮ್, ಮಲ್ಲೇಶ್, ನಾಗೇಶ್, ಸೋಮಣ್ಣ, ನಾಗರಾಜು ಹಾಗೂ ಇತರರು ಹಾಜರಿದ್ದರು.
ಚಾಮರಾಜನಗರದ ರೈಲ್ವೆ ನಿಲ್ದಾಣದಿಂದ ಬೌದ್ಧ ಉಪಾಸಕರು ದೆಹಲಿ ಚಲೋನಲ್ಲಿ ಭಾಗವಹಿಸಲು ತೆರಳಿದರು. ಸಿ.ಎಂ.ಕೃಷ್ಣಮೂರ್ತಿ, ಸಿದ್ದರಾಜು, ದಡದಹಳ್ಳಿ ಶಂಕರ್, ಸಿದ್ದರಾಜು, ಬಂಗಾರಸ್ವಾಮಿ, ನಾಗೇಶ್, ಎಂ.ಪುರುಷೋತ್ತಮ್, ಮಲ್ಲೇಶ್, ನಾಗೇಶ್, ಸೋಮಣ್ಣ, ನಾಗರಾಜು ಹಾಗೂ ಇತರರು ಹಾಜರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪ್ರಗತಿಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಸಿ.ಎಂ.ಕೃಷ್ಣಮೂರ್ತಿ ಅಭಿಪ್ರಾಯ
  • ದೆಹಲಿ ಚಲೋಗೆ ಹೊರಟ ಬೌದ್ಧ ಅನುಯಾಯಿಗಳು
  • ರಾಷ್ಟ್ರಮಟ್ಟದ ಬೌದ್ಧ ಸಮಾವೇಶ ಹಾಗೂ ಪ್ರತಿಭಟನಾ ರ‌್ಯಾಲಿ
ಚಾಮರಾಜನಗರ: ಬೌದ್ಧರ ಪವಿತ್ರ ಸ್ಥಳವಾದ ಬೋಧಗಯಾ ಮಹಾಬೋಧಿ ಮಹಾವಿಹಾರದ ಆಡಳಿತವನ್ನು ಸಂಪೂರ್ಣವಾಗಿ ಬೌದ್ಧರಿಗೆ ನೀಡುವವರೆಗೂ ನಿರಂತರ ಹೋರಾಟ ನಡೆಸಲಾಗುವುದು ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಸಿ.ಎಂ.ಕೃಷ್ಣಮೂರ್ತಿ ತಿಳಿಸಿದರು.
ನಗರದ ರೈಲ್ವೆ ನಿಲ್ದಾಣದಲ್ಲಿ ಇಂಟರ್ ನ್ಯಾಷನಲ್ ಮಾಂಕ್ಸ್ ಚಾರಿಟಬಲ್ ಟ್ರಸ್ಟ್, ಉಪಾಸಕ ಮತ್ತು ಉಪಾಸಕಿಯರ ಚಾರಿಟಬಲ್ ಟ್ರಸ್ಟ್, ನಳಂದ ಬೌದ್ಧ ವಿಶ್ವವಿದ್ಯಾಲಯ ಹಾಗೂ ಧ್ಯಾನ ಅಧ್ಯಯನ ಕೇಂದ್ರ ಅಹಯೋಗದಲ್ಲಿ ಸೋಮವಾರ ಬೌದ್ಧ ಅನುಯಾಯಿಗಳು ದೆಹಲಿ ಚಲೋಗೆ ಹೋರಾಟ ಸಂದರ್ಭದಲ್ಲಿ ಮಾತನಾಡಿದರು.
ಬೌದ್ಧರ ಪವಿತ್ರ ಸ್ಥಳವಾದ ಬೋಧಗಯಾ ಮಹಾಬೋಧಿ ಮಹಾವಿಹಾರದ ಆಡಳಿತಕ್ಕೆ ಸಂಬಂಧಪಟ್ಟಂತೆ ಬಿಹಾರ ಸರ್ಕಾರ 1949 ರಲ್ಲಿ ಬುದ್ಧಿಸ್ಟ್ ಟೆಂಪಲ್ ಕಾಯ್ದೆ ಜಾರಿ ಮಾಡಿದೆ. ಈ ಕಾಯ್ದೆ ಪ್ರಕಾರ ಮಹಾಬೋಧಿ ಮಹಾವಿಹಾರದ ಆಡಳಿತ ಮಂಡಳಿಗೆ ಬೌದ್ಧರೇತರರನ್ನು ಸೇರ್ಪಡೆಗೊಳಿಸಲಾಗಿದೆ. ಇದರಿಂದಾಗಿ ಮಹಾವಿಹಾರದ ಪಾವಿತ್ರ್ಯತೆಗೆ ದಕ್ಕೆ ಉಂಟಾಗಿದ್ದು. ಕಳೆದ ಹಲವಾರು ವರ್ಷಗಳಿಂದ ಮಹಾವಿಹಾರದ ವಿಮುಕ್ತಿಗಾಗಿ ಹೋರಾಟ ನಡೆಯುತ್ತಿದೆ. ಈ ಕಾರಣಕ್ಕಾಗಿ ನವದೆಹಲಿಯಲ್ಲಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದರು.
ನವದೆಹಲಿಯ ರಾಮಲೀಲಾ ಮೈದಾನದಲ್ಲಿ ೆ.12, 13 ಹಾಗೂ 14 ರಂದು ಮೂರು ದಿನಗಳ ಕಾಲ ರಾಷ್ಟ್ರಮಟ್ಟದ ಬೌದ್ಧ ಸಮಾವೇಶ ಹಾಗೂ ಪ್ರತಿಭಟನಾ ರ‌್ಯಾಲಿಯನ್ನು ಆಯೋಜಿಸಲಾಗಿದೆ. ಈ ಸಮಾವೇಶದಲ್ಲಿ ಭಾಗವಹಿಸಲು ಚಾಮರಾಜನಗರ ಹಾಗೂ ಹನೂರು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ 52 ಬೌದ್ಧ ಅನುಯಾಯಿಗಳು ಹೊರಟಿದ್ದೇವೆ. ೆ.10 ರಂದು ಬೀದರ್‌ನಿಂದ ವಿಶೇಷ ರೈಲಿನಲ್ಲಿ ತೆರಳಲಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಸಿದ್ದರಾಜು, ದಡದಹಳ್ಳಿ ಶಂಕರ್, ಸಿದ್ದರಾಜು, ಬಂಗಾರಸ್ವಾಮಿ, ನಾಗೇಶ್, ಎಂ.ಪುರುಷೋತ್ತಮ್, ಮಲ್ಲೇಶ್, ನಾಗೇಶ್, ಸೋಮಣ್ಣ, ನಾಗರಾಜು ಹಾಗೂ ಇತರರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net