ಮಾರ್ಟಳ್ಳಿ ಚರ್ಚ್‌ನಲ್ಲಿ ಸಂತ ಜೇಮ್ಸ್ ಹಬ್ಬ

ಮಾರ್ಟಳ್ಳಿ ಚರ್ಚ್‌ನಲ್ಲಿ ಸಂತ ಜೇಮ್ಸ್ ವಾರ್ಷಿಕ ಹಬ್ಬದ ಹಿನ್ನೆಲೆಯಲ್ಲಿ ವಿವಿಧ ಧರ್ಮಗುರುಗಳ ಸಮ್ಮುಖದಲ್ಲಿ ಬಲಿಪೂಜೆ ನೆರವೇರಿತು. ಜಯಶೀಲನ್, ಡಾ.ಎಂ. ವಿನ್ಸೆಂಟ್ ಇತರರಿದ್ದರು.
ಮಾರ್ಟಳ್ಳಿ ಚರ್ಚ್‌ನಲ್ಲಿ ಸಂತ ಜೇಮ್ಸ್ ವಾರ್ಷಿಕ ಹಬ್ಬದ ಹಿನ್ನೆಲೆಯಲ್ಲಿ ವಿವಿಧ ಧರ್ಮಗುರುಗಳ ಸಮ್ಮುಖದಲ್ಲಿ ಬಲಿಪೂಜೆ ನೆರವೇರಿತು. ಜಯಶೀಲನ್, ಡಾ.ಎಂ. ವಿನ್ಸೆಂಟ್ ಇತರರಿದ್ದರು.
Published on
ಹನೂರು: ತಾಲೂಕಿನ ಮಾರ್ಟಳ್ಳಿ ಚರ್ಚ್‌ನಲ್ಲಿ ಭಾನುವಾರ ಸಂತ ಜೇಮ್ಸ್ ವಾರ್ಷಿಕ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಇದರ ಅಂಗವಾಗಿ ಚರ್ಚ್ ಅನ್ನು ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುವಂತೆ ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗೆ ತಮಿಳುನಾಡಿನ ಶಿವಗಂಗೆಯ ಧರ್ಮಗುರು ಜಯಶೀಲನ್ ಇವರಿಂದ ಬಲಿಪೂಜೆಯು ಸಾವಿರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು. ರಾತ್ರಿ 8ರ ವೇಳೆಯಲ್ಲಿ ವಿದ್ಯುತ್ ದೀಪಾಲಕಾಂದಿಂದ ಕಂಗೊಳಿಸುವಂತೆ ವ್ಯವಸ್ಥೆ ಮಾಡಲಾಗಿದ್ದ ಭವ್ಯ ತೇರಿನ ಮೆರವಣಿಗೆಯು ಪ್ರಮುಖ ಬೀದಿಗಳಲ್ಲಿ ನಡೆಸಲಾಯಿತು. ಈ ವೇಳೆ ಭಕ್ತರು ಪ್ರಾರ್ಥನೆ ಹಾಗೂ ಸ್ತುತಿ ಗೀತೆಗಳನ್ನು ಹಾಡುತ್ತಾ ಸಾಗಿದರು. ಚರ್ಚ್‌ನ ಧರ್ಮಗುರು ಡಾ.ಎಂ ವಿನ್ಸೆಂಟ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net