13ರಂದು ರೈತರಿಂದ ಬಾರುಕೋಲು ಚಳವಳಿ

ಯಳಂದೂರು ಪಟ್ಟಣ ಪ್ರವಾಸಿ ಮಂದಿರದಲ್ಲಿ ರೈತ ಸಂಘದಿಂದ ಫೆ.13ರಂದು ನಡೆಯಲಿರುವ ರ‌್ಯಾಲಿಯ ಪೂರ್ವಭಾವಿ ಸಭೆಯಲ್ಲಿ ಸಂಘದ ಜಿಲ್ಲಾ ಮಂಡಳಿ ಸದಸ್ಯ ಅಂಬಳೆ ಶಿವಕುಮಾರ್ ಮಾತನಾಡಿದರು. ಸಿದ್ದಲಿಂಗಸ್ವಾಮಿ, ಮಹೇಶ್ ಇತರರು ಇದ್ದರು.
ಯಳಂದೂರು ಪಟ್ಟಣ ಪ್ರವಾಸಿ ಮಂದಿರದಲ್ಲಿ ರೈತ ಸಂಘದಿಂದ ಫೆ.13ರಂದು ನಡೆಯಲಿರುವ ರ‌್ಯಾಲಿಯ ಪೂರ್ವಭಾವಿ ಸಭೆಯಲ್ಲಿ ಸಂಘದ ಜಿಲ್ಲಾ ಮಂಡಳಿ ಸದಸ್ಯ ಅಂಬಳೆ ಶಿವಕುಮಾರ್ ಮಾತನಾಡಿದರು. ಸಿದ್ದಲಿಂಗಸ್ವಾಮಿ, ಮಹೇಶ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • stick-movement
ಯಳಂದೂರು: ಚಾಮರಾಜನಗರದಲ್ಲಿ ರೈತರ ವಿವಿಧ ಹಕ್ಕೊತ್ತಾಯಗಳ ಪೂರೈಕೆಗಾಗಿ ಸಾಮೂಹಿಕ ನಾಯಕತ್ವದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ಫೆ.13 ರಂದು ಬೃಹತ್ ರ‌್ಯಾಲಿಯೊಂದಿಗೆ ಬಾರುಕೋಲು ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾ ಮಂಡಳಿ ಸದಸ್ಯ ಅಂಬಳೆ ಶಿವಕುಮಾರ್ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಅಂದು ಸಾವಿರಾರು ರೈತರೊಂದಿಗೆ ಚಾಮರಾಜನಗರದ ಎಪಿಎಂಸಿ ಆವರಣದಿಂದ ಮೆರವಣಿಗೆ ಹೊರಟು ಚಾಮರಾಜನಗರದ ಮುಖ್ಯ ರಸ್ತೆಗಳಲ್ಲಿ ಸಂಚರಿಸಿ ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪಲಿದ್ದೇವೆ. ರೈತರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನೀತಿಗಳಿಂದ ಆಗುತ್ತಿರುವ ತೊಂದರೆ, ರೈತರ ಆತ್ಮಹತ್ಯೆಗಳನ್ನು ತಡೆಯುವಲ್ಲಿ ಸರ್ಕಾರಗಳು ವಿಫಲವಾಗಿವೆ. ರೈತರ ಅನುಮತಿಯನ್ನು ಪಡೆಯದೆ ಅಭಿವೃದ್ಧಿ ನೆಪದಲ್ಲಿ ಭೂಸ್ವಾಧೀನ ಮಾಡುತ್ತಿರುವ ಕ್ರಮ ನಿಲ್ಲಬೇಕು. ಸ್ವಾಮಿನಾಥನ್ ವರದಿ ಜಾರಿ, ವಿಬಿಜಿ ರಾಮ್‌ಜಿ ಯೋಜನೆ ಕೈಬಿಟ್ಟು ಮನರೇಗಾ ಯೋಜನೆಯನ್ನು ಪುನರ್ ಸ್ಥಾಪಿಸುವುದು ಸೇರಿ ವಿವಿಧ ಬೇಡಿಕೆಗಳ ಪಟ್ಟಿಯನ್ನು ಡಿಸಿ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ತಲುಪಿಸಲಾಗುವುದು. ತಾಲೂಕಿನ ಎಲ್ಲ ರೈತರು ಆ ದಿನ 9 ಗಂಟೆಗೆ ಎಪಿಎಂಸಿ ಆವರಣದಲ್ಲಿ ಸಮಾವೇಶಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಸಂಘದ ತಾಲೂಕು ಮಂಡಳಿ ಸದಸ್ಯ ಸಿದ್ದಲಿಂಗಸ್ವಾಮಿ, ಸದಸ್ಯರಾದ ಮಹೇಶ್, ವೃಷಭೇಂದ್ರ, ಮಹದೇವಸ್ವಾಮಿ, ಪುಟ್ಟಮಾದೇಗೌಡ ಸೇರಿದಂತೆ ಅನೇಕರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net