ಬೇಡಿಕೆಗಳು ಈಡೇರದಿದ್ದರೆ ಜನಪ್ರತಿನಿಧಿಗಳಿಗೆ ಕಪ್ಪು ಬಾವುಟ ಪ್ರದರ್ಶಿಸಲಾಗುವುದು. ರಾಜ್ಯ, ಜಿಲ್ಲೆ, ತಾಲೂಕು ಉಳಿಸಲಿ ಎಂದು ಸಿಎಂ, ಡಿಸಿಎಂ, ಎಂಪಿ, ಎಂಎಲ್‌ಎಗಳಿಗೆ ಅಧಿಕಾರ ಕೊಡಲಾಗಿದೆ. ಆಡಳಿತ, ವಿರೋಧ ಪಕ್ಷ ಎಲ್ಲರೂ ಒಂದೇಯಾಗಿರುವ ಕಾರಣ ನಮ್ಮದು ಎಲ್ಲರ ವಿರುದ್ಧದ ಹೋರಾಟ. ಆದ್ದರಿಂದ ಯಾರೇ ಆದರೂ ಕಾನೂನು ಚೌಕಟ್ಟು ಮೀರಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.