ಹಂದಿ ದಾಳಿ ರೈತನಿಗೆ ಗಾಯ

ದಿನ್ನಳ್ಳಿ ಬಳಿ ಕಾಡು ಹಂದಿ ದಾಳಿಯಿಂದ ಗಾಯಗೊಂಡ ರೈತನನ್ನು ಆರ್‌ಎಫ್‌ಒ ಮಾದೇಶ್ ಅವರು ಕಾಮಗೆರೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು.
ದಿನ್ನಳ್ಳಿ ಬಳಿ ಕಾಡು ಹಂದಿ ದಾಳಿಯಿಂದ ಗಾಯಗೊಂಡ ರೈತನನ್ನು ಆರ್‌ಎಫ್‌ಒ ಮಾದೇಶ್ ಅವರು ಕಾಮಗೆರೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು.
Published on
ಹನೂರು: ತಾಲೂಕಿನ ರಾಮಾಪುರ ಸಮೀಪದ ದಿನ್ನಳ್ಳಿ ಗ್ರಾಮದ ಬಳಿ ಗುರುವಾರ ಕಾಡು ಹಂದಿ ದಾಳಿ ನಡೆಸಿದ ಪರಿಣಾಮ ರೈತರೊಬ್ಬರು ಗಾಯಗೊಂಡಿದ್ದಾರೆ.
ತಾಲೂಕಿನ ಮಂಚಾಪುರ ಗ್ರಾಮದ ರೈತ ಪಳನಿ ಅವರು ಬೆಳಗ್ಗೆ ದಿನ್ನಳ್ಳಿ ಗ್ರಾಮದಲ್ಲಿನ ಜಮೀನಿಗೆ ತೆರಳುತ್ತಿದ್ದರು. ಈ ವೇಳೆ ಕಾಡು ಹಂದಿ ದಾಳಿ ನಡೆಸಿದ ಪರಿಣಾಮ ತೀವ್ರ ಗಾಯಗೊಂಡರು. ಈ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ತಿಳಿಸಲಾಗಿ ಸ್ಥಳಕ್ಕಾಗಮಿಸಿದ ಆರ್‌ಎಫ್‌ಒ ಮಾದೇಶ್ ಹಾಗೂ ಸಿಬ್ಬಂದಿ ಗಾಯಾಳನ್ನು ಇಲಾಖೆಯ ವಾಹನದಲ್ಲೇ ಕಾಮಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಅಗತ್ಯ ಚಿಕಿತ್ಸೆ ಕೊಡಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net