ಚಾಮರಾಜನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಬುಧವಾರ ಆಯೋಜಿಸಿದ್ದ 2025-26ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ರಾಷ್ಟ್ರೀಯ ಸೇವಾ ಯೋಜನೆ ರೋವರ್ಸ್ ಮತ್ತು ರೇಂಜರ್ಸ್, ರೆಡ್‌ಕ್ರಾಸ್, ಅಭಿವ್ಯಕ್ತಿ ಹಾಗೂ ವಿವಿಧ ಸಮಿತಿ ಚಟುವಟಿಕೆ ಸಮಾರೋಪ ಸಮಾರಂಭದಲ್ಲಿ ಹೊನ್ನುಡಿ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು. ರವಿಕುಮಾರ್ ಕೋಮಾರನಪುರ, ಎಚ್.ಎಲ್.ಚಂದ್ರಶೇಖರ್, ಲಹರಿ ಮಹೇಶ್, ಡಾ.ಆರ್.ಎಸ್.ಅಶ್ವಿನಿ, ಡಾ.ಮಂಜುನಾಥ್, ಎಂ.ಚಂದ್ರಕಲಾ, ಮಹಾದೇವಸ್ವಾಮಿ, ಡಾ.ಶಾಲಿನಿ ಇತರರಿದ್ದರು.
ಚಾಮರಾಜನಗರ: ಪಠ್ಯದಷ್ಟೇ ಪಠ್ಯೇತರ ಚಟುವಟಿಕೆಗೂ ಪ್ರಾಮುಖ್ಯತೆ ನೀಡಬೇಕು ಎಂದು ಗಾಯಕ ರವಿಕುಮಾರ್ ಕೋಮಾರನಪುರ ತಿಳಿಸಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಬುಧವಾರ ಆಯೋಜಿಸಿದ್ದ 2025-26ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ರಾಷ್ಟ್ರೀಯ ಸೇವಾ ಯೋಜನೆ ರೋವರ್ಸ್ ಮತ್ತು ರೇಂಜರ್ಸ್, ರೆಡ್‌ಕ್ರಾಸ್, ಅಭಿವ್ಯಕ್ತಿ ಹಾಗೂ ವಿವಿಧ ಸಮಿತಿ ಚಟುವಟಿಕೆ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆ ಮೂಲಕ ಯಶಸ್ಸನ್ನು ಗಳಿಸಬಹುದು. ಇದು ಸಂಸ್ಕಾರದ ಕಲಿಕೆಗೂ ಸಹಕಾರಿಯಾಗಲಿದೆ. ಅವಮಾನಗಳು ಸರಿದಾರಿಯಲ್ಲಿ ನಡೆಯಲು ನೆರವಾಗುತ್ತವೆ. ವಿದ್ಯಾರ್ಥಿಗಳು ದೇಶದ ಶಕ್ತಿ. ಸದೃಢ ದೇಶ ಕಟ್ಟುವಲ್ಲಿ ವಿದ್ಯಾರ್ಥಿಗಳ ಪಾತ್ರ ದೊಡ್ಡದು ಎಂದರು.
ಇದೇ ವೇಳೆ ಕಾಲೇಜಿನ ಹೊನ್ನುಡಿ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು. ಅಂತಾರಾಷ್ಟ್ರೀಯ ಕ್ರೀಡಾಪಟು ಎಚ್.ಎಲ್.ಚಂದ್ರಶೇಖರ್, ಯುವ ಗಾಯಕಿ ಲಹರಿ ಮಹೇಶ್ ಮಾತನಾಡಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಡಾ.ಆರ್.ಎಸ್.ಅಶ್ವಿನಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕರಾದ ಡಾ.ಮಂಜುನಾಥ್, ಎಂ.ಚಂದ್ರಕಲಾ, ಮಹಾದೇವಸ್ವಾಮಿ, ಡಾ.ಶಾಲಿನಿ, ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.