ಪ್ರತಿಯೊಬ್ಬರೂ ಅಂಬೇಡ್ಕರ್ ನೆನೆಯಬೇಕು

 ಚಾಮರಾಜನಗರದ ಸಿಮ್ಸ್ ಬೋದನಾ ಆಸ್ಪತ್ರೆಯ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ 135ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಡೀನ್ ಹಾಗೂ ನಿರ್ದೆಶಕ ಡಾ. ಎಚ್.ಜಿ. ಮಂಜುನಾಥ್ ಪುಷ್ಪಾರ್ಚನೆ ಮಾಡಿದರು. ಡಾ.ಚಿನ್ನಬೋವಿ, ಡಾ.ಕೆ.ಟಿ.ಅಜಯ್,  ಡಾ.ಏಜಾಜ್‌ಉಲ್ಲಾ ಖಾನ್, ಡಾ.ಮಾರುತಿ, ಚಂದ್ರಕಲಾ ವಿ.ಶೇಷಾಧ್ರಿ, ಜಮುನಾ, ಕೃಷ್ಣಮೂರ್ತಿ, ಡಾ.ಶಿವಸ್ವಾಮಿ, ಮಹೇಶ್, ಕೃಷ್ಣ ಮೂರ್ತಿ ಇತರರು ಹಾಜರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ ಡೀನ್ ಹಾಗೂ ನಿರ್ದೆಶಕ ಡಾ. ಎಚ್.ಜಿ. ಮಂಜುನಾಥ್ ಅಭಿಮತ
  • ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ 135ನೇ ಜನ್ಮ ದಿನಾಚರಣೆ ಕಾರ್ಯಕ್ರಮ
ಚಾಮರಾಜನಗರ: ಡಾ.ಬಿ.ಆರ್.ಅಂಬೇಡ್ಕರ್ ಅವರ ಸಾಧನೆಯನ್ನು ಪ್ರತಿಯೊಬ್ಬರು ನೆನೆಯಲೇಬೇಕು ಎಂದು ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ ಡೀನ್ ಹಾಗೂ ನಿರ್ದೆಶಕ ಡಾ. ಎಚ್.ಜಿ. ಮಂಜುನಾಥ್ ತಿಳಿಸಿದರು.
ನಗರದ ಸಿಮ್ಸ್ ಬೋದನಾ ಆಸ್ಪತ್ರೆಯ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ 135ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಹಾಗೂ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಡಾ.ಬಿ.ಆರ್.ಅಂಬೇಡ್ಕರ್ ಅವರು ಎಲ್ಲ ವರ್ಗದವರಿಗೂ ಸಮಾನತೆಯ ಜ್ಞಾನವನ್ನು ತುಂಬಿದವರು. ಅವರು ನೀಡಿರುವ ಸಂವಿಧಾನ ಜನಸಾಮಾನ್ಯರಿಗೆ ದಾರಿ ದೀಪವಾಗಿದೆ ಎಂದು ಹೇಳಿದರು.
ಪ್ರತಿಯೊಬ್ಬ ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ಡಾ.ಬಿ.ಆರ್.ಅಂಬೇಡ್ಕರ್ ಅವರ ಮನೆಯೇ ಪುಸ್ತಕದ ಭಂಡಾರವಾಗಿತ್ತು. ಭೀಮ ಎಂದರೆ ಶಕ್ತಿ ಅಂಬೇಡ್ಕರ್ ಅವರನ್ನು ಭೀಮರಾವ್ ಅಂದು ಕರೆಯುತ್ತಾರೆ. ಆ ಶಕ್ತಿ ಪುರುಷನನ್ನು ಪಡೆದ ನಾವುಗಳೇ ಪುಣ್ಯವಂತರು. ಅವರ ದಿನಾಚರಣೆಯನ್ನು ಮಾಡಿದರೆ ಸಾಲದು ಅವರು ನಮಗೆ ನೀಡಿರುವ ದಾರಿಯಲ್ಲಿ ನಡೆದು ಅವರಿಗೆ ಅರ್ಪಿಸಬೇಕು ಎಂದು ತಿಳಿಸಿದರು.
ಸಿಮ್ಸ್ ಅಧೀಕ್ಷಕ ಡಾ.ಸಿ.ವಿ.ಮಾರುತಿ ಮಾತನಾಡಿ, ಡಾ.ಬಿ.ಆರ್ ಅಂಬೇಡ್ಕರ್ ಅವರು ದೇಶವನ್ನು ಕಾಡುತ್ತಿದ್ದ ಅಸ್ಪೃಶ್ಯತೆಯ ಕಾಯಿಲೆಗೆ ಚಿಕಿತ್ಸೆ ನೀಡಿದವರು. ಸಂವಿಧಾನವನ್ನು ನೀಡಿ ಸಾಮಾನ್ಯ ಜನರು ಬದುಕಲು ದಾರಿ ಮಾಡಿಕೊಟ್ಟಿದ್ದಾರೆ. ಶಿಕ್ಷಣದಲ್ಲಿ ಸಾಧನೆಯನ್ನು ಮಾಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದಾರೆ ಎಂದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಚಿನ್ನಬೋವಿ, ಪ್ರಾಂಶುಪಾಲ ಡಾ.ಕೆ.ಟಿ.ಅಜಯ್, ಸ್ಥಾನಿಯ ವೈದ್ಯಧಿಕಾರಿ ಡಾ.ಏಜಾಜ್‌ಉಲ್ಲಾ ಖಾನ್, ಡಾ.ಮಾರುತಿ, ಶಶ್ರೂಷಕರ ಅಧಿಕ್ಷಕರಾದ ಚಂದ್ರಕಲಾ ವಿ.ಶೇಷಾಧ್ರಿ, ಜಮುನಾ, ಸಿಮ್ಸ್ ನರ್ಸಿಂಗ್ ಕಾಲೇಜಿನ ಉಪ ಪ್ರಾಂಶುಪಾಲ ಕೃಷ್ಣಮೂರ್ತಿ, ಡಾ.ಶಿವಸ್ವಾಮಿ, ಮಹೇಶ್, ಕೃಷ್ಣ ಮೂರ್ತಿ, ಕುಮಾರ್, ಶ್ರೀನಿವಾಸ್, ಪರಶಿವಮೂರ್ತಿ, ಮಧುಸೂದನ್, ಮಹೇಶ್, ಶೃಂಗಾರ್, ಪ್ರತಾಪ್, ಮಂಜುಳಾ, ಕಿಟ್ಟಿ, ಮಹದೇವ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net