ಶರಣ ತತ್ವದೆಡೆಗೆ ಎಲ್ಲರೂ ಸಾಗಬೇಕಿದೆ

ಚಾಮರಾಜನಗರ ತಾಲೂಕಿನ ನಂಜೇದೇವನಪುರ ಶ್ರೀಗುರುಮಲ್ಲೇಶ್ವರ ದಾಸೋಹ ಮಠದಲ್ಲಿ ಆಯೋಜಿಸಿದ್ದ ಬಸವ ಜಯಂತಿ ಮತ್ತು  ಬಸವ ಧರ್ಮ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.  ಶ್ರೀಇಮ್ಮಡಿ ಮುರುಘ ರಾಜೇಂದ್ರ ಸ್ವಾಮೀಜಿ, ಶ್ರೀಚನ್ನಬಸವ ಸ್ವಾಮೀಜಿ, ಮುಡುಗೂರು ಮಠದ ಶ್ರೀಉದ್ದಾನ ಸ್ವಾಮೀಜಿ, ದೇವನೂರು ಮಠದ ಶ್ರೀಮಹಾಂತ ಸ್ವಾಮೀಜಿ, ಶ್ರೀಮಠದ ಶ್ರೀರಾಜೇಂದ್ರ ಸ್ವಾಮೀಜಿ, ಕಾಡಾ ಅಧ್ಯಕ್ಷ ಪಿ. ಮರಿಸ್ವಾಮಿ,  ಲಿಂಗಾಯತ ಜಾಗೃತಿ ಸಮಿತಿಯ ಅಧ್ಯಕ್ಷ ಕಾಳನಹುಂಡಿ ಗುರುಸ್ವಾಮಿ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • principle of surrender
ಚಾಮರಾಜನಗರ: ಹನ್ನೆರಡನೇ ಶತಮಾನದಲ್ಲಿ ಬಸವಾದಿ ಶರಣರು ಸ್ಥಾಪನೆ ಮಾಡಿರುವ ಲಿಂಗಾಯತ ಧರ್ಮ ಅತ್ಯಂತ ಸರ್ವ ಶೇಷ್ಠವಾದ ಧರ್ಮವಾಗಿದೆ. ಇದನ್ನು ಪ್ರತಿಯೊಬ್ಬರೂ ಪಾಲನೆ ಮಾಡುವ ಮೂಲಕ ಬಸವ ತತ್ವದಡೆಗೆ ಎಲ್ಲರೂ ಸಾಗೋಣ ಎಂದು ಮರಿಯಾಲ ಮಠದ ಶ್ರೀಇಮ್ಮಡಿ ಮುರುಘ ರಾಜೇಂದ್ರ ಸ್ವಾಮೀಜಿ ತಿಳಿಸಿದರು.
ತಾಲೂಕಿನ ನಂಜೇದೇವನಪುರ ಶ್ರೀಗುರುಮಲ್ಲೇಶ್ವರ ದಾಸೋಹ ಮಠದಲ್ಲಿ ಬಸವ ಜಯಂತಿ ಮತ್ತು ಬಸವ ಧರ್ಮ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮೌಢ್ಯ, ಕಂದಾಚಾರ ಹಾಗೂ ಅನಿಷ್ಟ ಆಚರಣೆಗಳು ಮತ್ತು ವರ್ಣಭೇದ ನೀತಿಗಳ ವಿರುದ್ಧವಾಗಿ ಬಸವಣ್ಣ ಹೋರಾಟ ಮಾಡಿದರು. ಅವರು ಸಮಾನತೆ ಮತ್ತು ಶ್ರಮಿಕ ವರ್ಗಗಳ ಅಭ್ಯುದಯವನ್ನು ಬಯಸಿ, ಪ್ರತ್ಯೇಕ ಲಿಂಗಾಯತ ಧರ್ಮವನ್ನು ಸ್ಥಾಪನೆ ಮಾಡಿದ್ದರು ಎಂದು ವಿವರಿಸಿದರು.
ಕಬ್ಬಹಳ್ಳಿ ಬಾಲಕರ ಪ್ರೌಢಶಾಲೆಯ ಶಿಕ್ಷಕ ಸಿದ್ದರಾಜಪ್ಪ ಮಾತನಾಡಿದರು. ನಗರ ಮಠದ ಶ್ರೀಚನ್ನಬಸವ ಸ್ವಾಮೀಜಿ ಹಾಗೂ ಮುಡುಗೂರು ಮಠದ ಶ್ರೀಉದ್ದಾನ ಸ್ವಾಮೀಜಿ ಆಶೀರ್ವಚನ ನೀಡಿದರು.
ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿವಿಧ ಜಾನಪದ ಕಲಾತಂಡಗಳೊಂದಿಗೆ ಶ್ರೀಬಸವೇಶ್ವರರ ಭಾವಚಿತ್ರ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು. ಕಾರ್ಯಕ್ರಮದಲ್ಲಿ ದೇವನೂರು ಮಠದ ಶ್ರೀಮಹಾಂತ ಸ್ವಾಮೀಜಿ, ಶ್ರೀಮಠದ ಶ್ರೀರಾಜೇಂದ್ರ ಸ್ವಾಮೀಜಿ, ಕಾಡಾ ಅಧ್ಯಕ್ಷ ಪಿ. ಮರಿಸ್ವಾಮಿ, ಲಿಂಗಾಯತ ಜಾಗೃತಿ ಸಮಿತಿಯ ಅಧ್ಯಕ್ಷ ಕಾಳನಹುಂಡಿ ಗುರುಸ್ವಾಮಿ, ಎ.ಎಂ. ಗುರುಸ್ವಾಮಿ, ಗ್ರಾಮಸ್ಥರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net