ಗುಣಮಟ್ಟದ ಶಿಕ್ಷಣಕ್ಕಾಗಿ ಸರ್ಕಾರಿ ಶಾಲೆಗೆ ಸೇರಿಸಿ

ಚಾಮರಾಜನಗರದ ನಗರದ ಗಾಳೀಪುರ ಬಡಾವಣೆಯ ಬೀಡಿ ಕಾಲನಿಯ ಕೆಪಿಎಸ್ ಮಾದರಿಯ ಮೌಲಾನಾ ಆಜಾದ್ ಪಬ್ಲಿಕ್ ಶಾಲಾರಂಭ ಕಾರ್ಯಕ್ರಮವನ್ನು ಚುಡಾ ಅಧ್ಯಕ್ಷ ಮಹಮದ್ ಅಸ್ಗರ್(ಮುನ್ನಾ) ಉದ್ಘಾಟಿಸಿದರು. ಮಹದೇವಸ್ವಾಮಿ, ಕೆ.ಎಸ್.ಮಾದಪ್ಪ, ಸಿ.ಕೆ.ರಾಮಸ್ವಾಮಿ, ರಾಜೀವ್, ಕಲೀಲ್‌ಉಲ್ಲಾ, ಯೊಸ್ಮಿನ್ ತಾಜ್, ಅಜೀರಾ ಬೇಗಂ ಇತರರು ಹಾಜರಿದ್ದರು.
ಚಾಮರಾಜನಗರದ ನಗರದ ಗಾಳೀಪುರ ಬಡಾವಣೆಯ ಬೀಡಿ ಕಾಲನಿಯ ಕೆಪಿಎಸ್ ಮಾದರಿಯ ಮೌಲಾನಾ ಆಜಾದ್ ಪಬ್ಲಿಕ್ ಶಾಲಾರಂಭ ಕಾರ್ಯಕ್ರಮವನ್ನು ಚುಡಾ ಅಧ್ಯಕ್ಷ ಮಹಮದ್ ಅಸ್ಗರ್(ಮುನ್ನಾ) ಉದ್ಘಾಟಿಸಿದರು. ಮಹದೇವಸ್ವಾಮಿ, ಕೆ.ಎಸ್.ಮಾದಪ್ಪ, ಸಿ.ಕೆ.ರಾಮಸ್ವಾಮಿ, ರಾಜೀವ್, ಕಲೀಲ್‌ಉಲ್ಲಾ, ಯೊಸ್ಮಿನ್ ತಾಜ್, ಅಜೀರಾ ಬೇಗಂ ಇತರರು ಹಾಜರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಚುಡಾ ಅಧ್ಯಕ್ಷ ಮಹಮದ್ ಅಸ್ಗರ್ ಸಲಹೆ
  • ಮೌಲಾನಾ ಆಜಾದ್ ಪಬ್ಲಿಕ್ ಶಾಲೆ ಆರಂಭ
ಚಾಮರಾಜನಗರ: ರಾಜ್ಯ ಸರ್ಕಾರ ಮಕ್ಕಳ ಶಿಕ್ಷಣಕ್ಕಾಗಿ ಕೋಟ್ಯಾಂತರ ರೂ.ವೆಚ್ಚ ಮಾಡುತ್ತಿದ್ದು, ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸಿ, ಗುಣಮಟ್ಟದ ಶಿಕ್ಷಣ ಕೊಡಿಸಬೇಕು ಎಂದು ಚಾಮರಾಜನಗರ ರಾಮಸಮುದ್ರ ನಗರಾಭಿವೃದ್ದಿ ಪ್ರಾಧಿಕಾರ(ಚುಡಾ) ಅಧ್ಯಕ್ಷ ಮಹಮದ್ ಅಸ್ಗರ್(ಮುನ್ನಾ) ಸಲಹೆ ನೀಡಿದರು.
ನಗರದ ಗಾಳೀಪುರ ಬಡಾವಣೆಯ ಬೀಡಿ ಕಾಲನಿಯಲ್ಲಿ ಸೋಮವಾರ ಆಯೋಜಿಸಿದ್ದ ಕೆಪಿಎಸ್ ಮಾದರಿಯ ಮೌಲಾನಾ ಆಜಾದ್ ಪಬ್ಲಿಕ್ ಶಾಲಾರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ಉರ್ದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೌಲಾನಾ ಆಜಾದ್ ಪಬ್ಲಿಕ್ ಶಾಲೆ ಆರಂಭವಾಗುತ್ತಿದೆ, ಎಲ್‌ಕೆಜಿಯಿಂದ 8ನೇ ತರಗತಿಯವರಗೆ ಶಿಕ್ಷಣ ನೀಡಲಾಗುತ್ತದೆ. ಶಾಲೆಯಲ್ಲಿ ನುರಿತ ಶಿಕ್ಷಕರಿಂದ ಗುಣಮಟ್ಟದ ಬೋಧನೆ ಮಕ್ಕಳಿಗೆ ಸಿಗಲಿ ಎಂದರು.
ಉರ್ದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆಪಿಎಸ್ ಮಾದರಿಯ ಮೌಲಾನಾ ಆಜಾದ್ ಪಬ್ಲಿಕ್ ಶಾಲೆ ಆರಂಭಿಸುವಂತೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರ ಬಳಿ ಮನವಿ ಮಾಡಿದ್ದೆ. ಜತೆಗೆ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕೆ.ವೆಂಕಟೇಶ್ ಅವರ ಗಮನಕ್ಕೂ ತಂದಿದ್ದೆ. ಇದರ ಲವಾಗಿ ಕೆಪಿಎಸ್ ಮಾದರಿಯ ಮೌಲಾನಾ ಆಜಾದ್ ಪಬ್ಲಿಕ್ ಶಾಲೆ ಮಂಜೂರಾಯಿತು ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಶೆಟ್ಟಿ ಮಾತನಾಡಿ, ಸಮುದಾಯದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಲಿದೆ. ಪಾಲಕರು ತಮ್ಮ ಮಕ್ಕಳಿಗೆ ಸರ್ಕಾರದ ಸವಲತ್ತು ಕೊಡಿಸುವ ಮೂಲಕ ಅವರನ್ನು ಸಮಾಜದ ಉತ್ತಮ ಪ್ರಜೆಗಳಾಗಿ ರೂಪಿಸಬೇಕು ಎಂದು ಮನವಿ ಮಾಡಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಹದೇವಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಮಾದಪ್ಪ, ತಾಲೂಕು ಅಧ್ಯಕ್ಷ ಸಿ.ಕೆ.ರಾಮಸ್ವಾಮಿ, ಬಿಆರ್‌ಸಿ ರಾಜೀವ್, ನಗರಸಭೆ ಮಾಜಿ ಸದಸ್ಯ ಕಲೀಲ್‌ಉಲ್ಲಾ, ಎಸ್‌ಡಿಎಂಸಿ ಅಧ್ಯಕ್ಷೆ ಯೊಸ್ಮಿನ್ ತಾಜ್, ಮುಖ್ಯಶಿಕ್ಷಕಿ ಅಜೀರಾಬೇಗಂ, ಬಿಆರ್‌ಸಿ ಶಿಕ್ಷಕ ಎಂ,ಮುರುಗೇಶ್‌ಕುಮಾರ್ ಮತ್ತು ಪಾಲಕರು, ವಿದ್ಯಾರ್ಥಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net