ಆರಂಭಿಕ ವೆಚ್ಚವನ್ನು ಗಮನಿಸಿದರೆ, ಸಾಂಪ್ರದಾಯಿಕ ಬಾಳೆ ಕಂದುಗಳ ಖರೀದಿ ವೆಚ್ಚ ಕಡಿಮೆಯಿರುತ್ತದೆ ಮತ್ತು ಅಂಗಾಂಶ ಕೃಷಿ ಸಸಿಗಳ ಆರಂಭಿಕ ವೆಚ್ಚ ಕೊಂಚ ಹೆಚ್ಚಿರುತ್ತದೆ. ಆದರೆ, ದೀರ್ಘಕಾಲಿಕ ಸುಸ್ಥಿರ ಕೃಷಿಯ ದೃಷ್ಟಿಯಿಂದ ನೋಡಿದಾಗ ಸಾಂಪ್ರದಾಯಿಕ ಪದ್ಧತಿಯಲ್ಲಿ ಮಣ್ಣಿನಲ್ಲಿ ರೋಗ ಸಂಗ್ರಹವಾಗುವ ಸಾಧ್ಯತೆ ಹೆಚ್ಚಿರುತ್ತದೆ ಮತ್ತು ಕಾರ್ಮಿಕ ನಿರ್ವಹಣಾ ವೆಚ್ಚ ಹೆಚ್ಚಾಗಿ ಲಾಭ ಅಸ್ಥಿರವಾಗಿರುತ್ತದೆ. ಆದರೆ ಅಂಗಾಅಶ ಕೃಷಿಯಲ್ಲಿ ಸುಲಭ ನಿರ್ವಹಣೆಯಿಂದಾಗಿ ಕಾರ್ಮಿಕ ವೆಚ್ಚ ಕಡಿಮೆಯಾಗುವುದಲ್ಲದೆ, ಮಾರುಕಟ್ಟೆಯಲ್ಲಿ ಹಣ್ಣುಗಳಿಗೆ ಉತ್ತಮ ಬೆಲೆ ಸಿಗುವುದರಿಂದ ದೀರ್ಘಾವಧಿಯಲ್ಲಿ ರೈತರಿಗೆ ಅತ್ಯಧಿಕ ಲಾಭ ದೊರೆಯುತ್ತದೆ.