ಗುಣಮಟ್ಟದ ಕಾಮಗಾರಿ ನಿರ್ಮಾಣಕ್ಕೆ ಒತ್ತು

ಚಾಮರಾಜನಗರ ತಾಲೂಕಿನ ಕೂತ್ತಲವಾಡಿ  ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಭೂಮಿಪೂಜೆ ನೆರವೇರಿಸಿದರು. ಶಾಂತಪ್ಪ,  ಸೋಮುಲಿಂಗಪ್ಪ, ಗೌಡಿಕೆ ರಾಜಶೇಖರ್, ಸೋಮಪ್ಪ, ಪುಟ್ಟಲಿಂಗಯ್ಯ, ಮಹದೇವಶೆಟ್ಟಿ, ಎ.ಎಸ್.ಗುರುಸ್ವಾಮಿ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಸಿ.ಪುಟ್ಟರಂಗಶೆಟ್ಟಿ ಭರವಸೆ
  • ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕರಿಂದ ಚಾಲನೆ
  • ಸುಮಾರು 1.50 ಕೋಟಿ ರೂ ವೆಚ್ಚದ ಕಾಮಗಾರಿ
ಚಾಮರಾಜನಗರ ತಾಲೂಕಿನ ಕೂತ್ತಲವಾಡಿ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಭೂಮಿಪೂಜೆ ನೆರವೇರಿಸಿದರು. ಶಾಂತಪ್ಪ, ಸೋಮುಲಿಂಗಪ್ಪ, ಗೌಡಿಕೆ ರಾಜಶೇಖರ್, ಸೋಮಪ್ಪ, ಪುಟ್ಟಲಿಂಗಯ್ಯ, ಮಹದೇವಶೆಟ್ಟಿ, ಎ.ಎಸ್.ಗುರುಸ್ವಾಮಿ ಇತರರಿದ್ದರು.
ಚಾಮರಾಜನಗರ: ತಾಲೂಕಿನ ಕೂತ್ತಲವಾಡಿ, ಕಟ್ನವಾಡಿ ಗ್ರಾಮದಲ್ಲಿ 1.50 ಕೋಟಿ ರೂ, ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಶುಕ್ರವಾರ ಭೂಮಿಪೂಜೆ ನೆರವೇರಿಸಿದರು.
ಬಳಿಕ ಶಾಸಕ ಪುಟ್ಟರಂಗಶೆಟ್ಟಿ ಮಾತನಾಡಿ, ಕಟ್ನವಾಡಿ ಗ್ರಾಮದಲ್ಲಿ ಎಸ್ಸಿಎಸ್ಪಿ ಯೋಜನೆಯಡಿಯಲ್ಲಿ ಪರಿಶಿಷ್ಟರ ಬೀದಿಗೆ ರಸ್ತೆ, ಚರಂಡಿ ಅಭಿವೃದ್ಧಿಗೆ 50 ಲಕ್ಷ ರೂ, ವೆಚ್ಚದ ಕಾಮಗಾರಿ ಹಾಗೂ ವಿಶೇಷ ಅಭಿವೃದ್ದಿ ಅನುದಾನ ಯೋಜನೆಯಡಿಯಲ್ಲಿ ಕೂತ್ತಲವಾಡಿ ಗ್ರಾಮದ ಮಾರ್ಗವಾಗಿ ಗೂರುವಿನಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ದಿಗೆ 1 ಕೋಟಿ ರೂ, ವೆಚ್ಚದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗಿದೆ ಎಂದರು.
ತಮ್ಮ ಕೇತ್ರವ್ಯಾಪ್ತಿಯಲ್ಲಿ ಜನತೆಯ ಆಶಯಕ್ಕೆ ಬದ್ಧರಾಗಿ ಗ್ರಾಮಗಳಲ್ಲಿ ರಸ್ತೆ, ಚರಂಡಿ, ಸಮುದಾಯ ಭವನ, ಆಶ್ರಯಮನೆ, ಗಂಗಾ ಕಲ್ಯಾಣ ಯೋಜನೆ ಸೇರಿದಂತೆ ಸರ್ಕಾರ ಮಂಜೂರು ಮಾಡುವ ಅನುದಾನ ಹಾಗೂ ಸೌಲಭ್ಯಗಳನ್ನು ಜನರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಾಗುತ್ತಿದೆ. ಕಾಮಗಾರಿ ನಿರ್ವಹಣೆ ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಗೆ ಒತ್ತು ನೀಡಬೇಕು ಎಂದರು.
ಈ ವೇಳೆ ತಾ.ಪಂ ಮಾಜಿ ಅಧ್ಯಕ್ಷ ಶಾಂತಪ್ಪ, ಮುಖಂಡರಾದ ಸೋಮುಲಿಂಗಪ್ಪ, ಗೌಡಿಕೆ ರಾಜಶೇಖರ್, ಸೋಮಪ್ಪ, ಪುಟ್ಟಲಿಂಗಯ್ಯ, ಮಹದೇವಶೆಟ್ಟಿ, ಎ.ಎಸ್.ಗುರುಸ್ವಾಮಿ, ಉಡಿಗಾಲ ನಂಜಪ್ಪ, ನಾಗರಾಜು, ಬಿಸಲವಾಡಿ ರವಿ, ಗುರುಸ್ವಾಮಿ, ಸೋಮಣ್ಣ, ಮಹದೇವ ಪ್ರಸಾದ್, ದೂರಸ್ವಾಮಿ, ನಾಗಮಲ್ಲಪ್ಪ, ಶಿವನಂಜಪ್ಪ, ಇಂಜೀನಿಯರ್ ಮಧು ಹಾಗೂ ಇತರರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net