404 ಮಕ್ಕಳು ದಾಖಲು: 2016-17ನೇ ಸಾಲಿನಲ್ಲಿ 60 ಮಕ್ಕಳ ದಾಖಲಾತಿಯೊಂದಿಗೆ 6ನೇ ತರಗತಿಯಿಂದ ಆರಂಭವಾದ ಈ ಮಾದರಿ ವಸತಿ ಶಾಲೆಯಲ್ಲಿ ಪಿಯುಸಿವರೆಗೆ ಶಿಕ್ಷಣ ಇದ್ದು, ಪ್ರಸ್ತುತ 404 ಬುಡಕಟ್ಟು ಸಮುದಾಯದ ಮಕ್ಕಳು ದಾಖಲಾಗಿದ್ದಾರೆ. ಇಲ್ಲಿಗೆ ಸೋಲಿಗರ ಗ್ರಾಮಗಳಾದ ತಾಲೂಕಿನ ಗಾಣಿಗಮಂಗಲ, ಕೋಣನಕೆರೆ, ಮಾವತ್ತೂರು ಹಾಗೂ ಮಲೆಮಹದೇಶ್ವರ ಬೆಟ್ಟ, ಪೊನ್ನಾಚಿ, ಒಡೆಯರಪಾಳ್ಯ, ಅಜ್ಜೀಪುರ ಭಾಗದ ಗಿರಿಜನರ ಹಾಡಿಗಳ ಮಕ್ಕಳು ದಾಖಲಾಗಿದ್ದಾರೆ. ಜತೆಗೆ ಯಾದಗಿರಿ, ರಾಚಚೂರು, ಕಲಬುರಗಿ ಹಾಗೂ ಗದಗ ಜಿಲ್ಲೆಯ ಮಕ್ಕಳು ಸಹ ಶಿಕ್ಷಣ ಪಡೆಯುತ್ತಿದ್ದು, ಶಿಕ್ಷಕರು ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿರುವುದಕ್ಕೆ ಈ ಬಾರಿಯ ಫಲಿತಾಂಶವೇ ಸಾಕ್ಷಿಯಾಗಿದೆ.