ಗ್ರಾಮಗಳ ಈದ್ಗಾದಲ್ಲಿ ಪ್ರಾರ್ಥನೆ: ತಾಲೂಕಿನಲ್ಲಿ ಹೆಚ್ಚು ಮುಸ್ಲಿಮರು ವಾಸಿಸುವ ಬಂಡಳ್ಳಿ, ಕೌದಳ್ಳಿ, ಎಲ್ಲೇಮಾಳ, ದಿನ್ನಳ್ಳಿ, ಮಂಗಲ, ಒಡೆಯರಪಾಳ್ಯ, ಕಣ್ಣೂರು, ಅಜ್ಜೀಪುರ, ಚಿಗತಾಪುರ, ಕೆ.ಗುಂಡಾಪುರ ಹಾಗೂ ಈ ಭಾಗದ ಇ ತರೆ ಗ್ರಾಮಗಳಲ್ಲಿನ ಮುಸ್ಲಿಮರು ಆಯಾ ಗ್ರಾಮದ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಪುಟಾಣಿಗಳು ಹೊಸ ಬಟ್ಟೆ ಧರಿಸಿ ಪರಸ್ಪರ ಶುಭ ಕೋರುವುದರ ಮೂಲಕ ಸಂಭ್ರಮಿಸಿದರು. ಇನ್‌ಸ್ಪೆಕ್ಟರ್ ಆನಂದಮೂರ್ತಿ ನೇತೃತ್ವದಲ್ಲಿ ಮುಂಜಾಗ್ರತಾ ಕ್ರಮವಾಗಿ ಆಯಾ ಗ್ರಾಮಗಳಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.