ತಾಲೂಕಿನಲ್ಲಿ ಈ ಬಾರಿ 7 ಸರ್ಕಾರಿ ಪ್ರೌಢಶಾಲೆ, 7 ಅನುದಾನಿತ, 2 ವಸತಿ ಶಾಲೆ ಹಾಗೂ 2 ಖಾಸಗಿ ಶಾಲೆಗಳೂ ಸೇರಿದಂತೆ 18 ಶಾಲೆಗಳಲ್ಲಿ ಒಟ್ಟು 869 ವಿದ್ಯಾರ್ಥಿಗಳ ಈ ಬಾರಿ ಪರೀಕ್ಷೆಗೆ ಬರೆಯಲಿದ್ದಾರೆ. ಉತ್ತಮ ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ಡಿಸೆಂಬರ್‌ನಿಂದಲೇ ಮುಂಜಾನೆ ಮತ್ತು ಸಂಜೆ ವೇಳೆಯಲ್ಲಿ ಕಲಿಕೆ, ಜತೆಗೆ ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಕಲಿಕೆಗೆ ಆದ್ಯತೆ ನೀಡಲಾಗುತ್ತಿದೆ. ಸುಲಭವಾಗಿ ಉತ್ತೀರ್ಣವಾಗಲು ಅನುಕೂಲವಾಗುವ ಸರಳವಾದ 1 ಅಂಕ, 2 ಅಂಕ, ಹಾಗೂ 5 ಅಂಕಗಳನ್ನು ಒಳಗೊಂಡಿರುವ ಪ್ರಶ್ನೆಗಳಿಗೆ ಉತ್ತರಿಸುವ ಬಗ್ಗೆ ತರಗತಿಯಲ್ಲಿ ತಿಳಿಸುವ ಮೂಲಕ ಪಠ್ಯಾಧಾರಿತ ಮೌಲ್ಯಮಾಪನ ಮಾಡಲಾಗುತ್ತಿದೆ. ಬೆಳಗ್ಗೆ 9 ರಿಂದ 10 ಗಂಟೆ ವರಗೆ ವಿಶೇಷ ತರಗತಿ, ಸಂಜೆ 5 ರಿಂದ 6.30 ರ ವರೆಗೆ ಗುಂಪುಅಧ್ಯಯನ, ಪ್ರತಿ ಪಾಠಕ್ಕೂ ಘಟಕ ಪರೀಕ್ಷೆ, ಫೋನ್ ಇನ್ ಪ್ರೇರಣ ಕಾರ್ಯಕ್ರಮ, ಪಾಲಕ ಸಭೆ ಸೇರಿದಂತೆ 3ಕ್ಕೂ ಹೆಚ್ಚು ಮಾದರಿ ಪರೀಕ್ಷೆ ನಡೆದಲಾಗಿದೆ.