ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪೂರ್ವದಲ್ಲಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 4,30,786 ಪುರುಷರು, 4,49,390 ಮಹಿಳೆಯರು, ಇತರೆ 48 ಸೇರಿ 8,80,224 ಮತದಾರರಿದ್ದರು. ಹನೂರು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 1,12,045 ಪುರುಷರು, 1,12,565 ಮಹಿಳೆಯರು, ಇತರೆ 6 ಸೇರಿ 2,24,616 ಮತದಾರರಿದ್ದರು. ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 1,07,898 ಪುರುಷರು, 1,13,235 ಮಹಿಳೆಯರು, ಇತರೆ 18 ಸೇರಿ 2,21,151 ಮತದಾರರಿದ್ದರು. ಚಾಮರಾಜನಗರ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 1,05,541 ಪುರುಷರು, 1,12,297 ಮಹಿಳೆಯರು, ಇತರೆ 14 ಸೇರಿ 2,17,852 ಮತದಾರರಿದ್ದರು. ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 1,05,302 ಪುರುಷರು, 1,11,293 ಮಹಿಳೆಯರು, ಇತರೆ 10 ಸೇರಿ 2,16,605 ಮತದಾರರಿದ್ದರು.