16ರಂದು ಡಾ.ಶ್ರೀ ಶಿವಕುಮಾರ ಸ್ವಾಮೀಜಿ 119ನೇ ಜನ್ಮ ದಿನೋತ್ಸವ

 ಡಾ.ಶ್ರೀ.ಶಿವಕುಮಾರ ಸ್ವಾಮೀಜಿ
ಡಾ.ಶ್ರೀ.ಶಿವಕುಮಾರ ಸ್ವಾಮೀಜಿ
Published on
ಕೊಳ್ಳೇಗಾಲ: ಪಟ್ಟಣದ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಬಡಾವಣೆಯ ಬಸವ ಮಹಾಮನೆಯಲ್ಲಿ ಏ.16 ರಂದು ಸಂಜೆ 5 ಗಂಟೆಗೆ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರ 119ನೇ ಜನ್ಮ ದಿನೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ.
ಡಾ.ಶ್ರೀ ಶಿವಕುಮಾರ ಸ್ವಾಮೀಜಿ ನಗರ ನಿವಾಸಿಗಳು, ವೀರಶೈವ ಲಿಂಗಾಯತ ನೌಕರರ ಬಸವ ಸೇವಾ ಸಮಿತಿ, ಶ್ರೀ ಬಸವ ಸೇವಾ ಪತ್ತಿನ ಸಹಕಾರ ಸಂಘ, ಬಸವ ಮಹಾಮನೆ ಟ್ರಸ್ಟ್ ಹಾಗೂ ಕೊಳ್ಳೇಗಾಲ ನಗರದ ವೀರ ಶೈವ ಲಿಂಗಾಯತರ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಮರಿಯಾಲ ಶ್ರೀ ಮುರುಘರಾಜೇಂದ್ರ ಮಹಾ ಸಂಸ್ಥಾನ ಮಠದ ಶ್ರೀ ಇಮ್ಮಡಿ ಮರುಘರಾಜೇಂದ್ರ ಸ್ವಾಮೀಜಿ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಮೈಸೂರು ಕಲ್ಲುಮಠ ಅಗರ ಹಾಗು ನೀಲಕಂಠಸ್ವಾಮಿ ಮಠದ ಶ್ರೀಸಿದ್ದಮಲ್ಲ ಸ್ವಾಮೀಜಿ, ಹುಣಸೂರು ಮಾಡಹಳ್ಳಿ ಉಕ್ಕಿನಕಂತೆ ಮಠದ ಶ್ರೀ ಸಾಂಬ ಸದಾಶಿವಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಧನಗೂರು ಮಳ್ಳವಳ್ಳಿ ತಾಲೂಕು ಶ್ರೀ ವೀರಸಿಂಹಾಸನ ಮಠದ ಮುಮ್ಮಡಿ ಷಡಕ್ಷರ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಮ್ಮುಖ ವಹಿಸಲಿದ್ದಾರೆ.
ಕೊಳ್ಳೇಗಾಲ ಬಿಕ್ಷದ ಮಠದ ಶ್ರೀ ಶಿವಪ್ಪ ಸ್ವಾಮೀಜಿ ಹಾಗೂ ಎಲ್ಲ ಹರಗೂರು ಚರಮೂರ್ತಿಗಳು ಭಾಗವಹಿಸುವರು.
ಚಾಮರಾಜನಗರ ಜಿಲ್ಲೆ ಬಸವಟ್ಟಿ ಗ್ರಾಮದ ಕಿರುತೆರೆ ಮತ್ತು ಚಲನಚಿತ್ರ ನಟ ಬಸವಟ್ಟಿ ಲೋಕೇಶ್ ವಿಶೇಷ ಆಹ್ವಾನಿತರಾಗಿದ್ದಾರೆ. ಶ್ರೀ ಮಹದೇಶ್ವರ ಕಲಾ ತಂಡ ಕೊಳ್ಳೇಗಾಲ ಇವರಿಂದ ಸಂಜೆ 4 ಗಂಟೆಯಿಂದ ಭಜನೆ ಕಾರ್ಯಕ್ರಮ ನಡೆಯಲಿದೆ. ರಾತ್ರಿ 8.30ಕ್ಕೆ ಪ್ರಸಾದ ವಿನಿಯೋಗ ಮಾಡಲಾಗುತ್ತದೆ. ಬಸವ ಮಹಾಮನೆ ಟ್ರಸ್ಟ್ ಅಧ್ಯಕ್ಷ ಮಲ್ಲೇಶಪ್ಪ, ಪ್ರಧಾನ ಕಾರ್ಯದರ್ಶಿ ವೀರಭದ್ರಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿಗೆಅವರ ಫೋಟೋ ಬಳಸಿಕೊಳ್ಳಲು ಮನವಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net