ಜಾತಿಯ ಕಣ್ಣುಗಳಿಂದ ನೋಡದಿರಿ

ಕೊಳ್ಳೇಗಾಲದ ಮರಡಿಗುಡ್ಡದಲ್ಲಿ ವೃಕ್ಷವನ ವಾಯು ವಿಹಾರಿಗಳ ಸಂಘದಿಂದ ಅಂಬೇಡ್ಕರ್ ಅವರ 135ನೇ ಜಯಂತಿ ಆಚರಣೆ ಮಾಡಲಾಯಿತು. ಮಹದೇವ ಶಂಕನಪುರ, ನಂದೀಶ್,  ಮಹದೇವಸ್ವಾಮಿ, ಮಹದೇವ ಪ್ರಸಾದ್,ಪ್ರಕಾಶ್, ಶಿವಣ್ಣ, ಶಿವಮೂರ್ತಿ ಇತರರಿದ್ದರು.
ಕೊಳ್ಳೇಗಾಲದ ಮರಡಿಗುಡ್ಡದಲ್ಲಿ ವೃಕ್ಷವನ ವಾಯು ವಿಹಾರಿಗಳ ಸಂಘದಿಂದ ಅಂಬೇಡ್ಕರ್ ಅವರ 135ನೇ ಜಯಂತಿ ಆಚರಣೆ ಮಾಡಲಾಯಿತು. ಮಹದೇವ ಶಂಕನಪುರ, ನಂದೀಶ್, ಮಹದೇವಸ್ವಾಮಿ, ಮಹದೇವ ಪ್ರಸಾದ್,ಪ್ರಕಾಶ್, ಶಿವಣ್ಣ, ಶಿವಮೂರ್ತಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಾಹಿತಿ ಮಹದೇವ ಶಂಕನಪುರ ಸಲಹೆ
ಕೊಳ್ಳೇಗಾಲ: ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಜಾತಿಯ ಕಣ್ಣುಗಳಿಂದ ನೋಡುವುದನ್ನು ಬಿಡಬೇಕು ಎಂದು ರಾಜ್ಯ ಪ್ರಶಸ್ತಿ ಪುರಸ್ಕೃತ ಹಾಗೂ ಸಾಹಿತಿ ಮಹದೇವ ಶಂಕನಪುರ ಹೇಳಿದರು.
ಪಟ್ಟಣದ ಮರಡಿಗುಡ್ಡದಲ್ಲಿ ಮಂಗಳವಾರ ಮರಡಿಗುಡ್ಡ ವೃಕ್ಷವನ ವಾಯು ವಿಹಾರಿಗಳ ಸಂಘದಿಂದ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತಿಯಲ್ಲಿ ಮಾತನಾಡಿದರು. ಅಂಬೇಡ್ಕರ್ ಅವರನ್ನು ಒಂದು ಜಾತಿಗೆ ಸೀಮಿತಗೊಳಿಸುವುದು ದುರದೃಷ್ಟಕರ ಸಂಗತಿ. ಅಂಬೇಡ್ಕರ್ ಜಯಂತಿ ಆಚರಿಸುವುದು ದೇಶದ ನಾಗರಿಕರ ಜವಾಬ್ದಾರಿ. ದೇಶದ ಅಧಿಕಾರ ಮತ್ತು ಸಂಪತ್ತು ಪ್ರತಿ ಜಾತಿಯ ಜನಸಂಖ್ಯೆಗೆ ಅನುಗುಣವಾಗಿ ಸಮಾನವಾಗಿ ಹಂಚಿಕೆ ಆಗಬೇಕು ಎಂದು ತಿಳಿಸಿದರು.
ಎಲ್ಲರಿಗೂ ಮತದಾನ ಹಕ್ಕು ಸಿಗಬೇಕೆಂದು ನಡೆಸಿದ ಹೋರಾಟ ಅವಿಸ್ಮರಣೀಯ. ದೇಶದ ಪ್ರತಿಯೊಬ್ಬರಿಗೂ ಹಕ್ಕು, ಅಧಿಕಾರ ಸಮನಾಗಿ ಸಿಗಬೇಕೆಂಬುದು ಅಂಬೇಡ್ಕರ್‌ರ ಹೋರಾಟವಾಗಿತ್ತು. ಹಾಗಾಗಿ ಸ್ವಾತಂತ್ರೃ ನಂತರ ಭಾರತದಲ್ಲಿ ಸಂವಿಧಾನದಡಿ ಪ್ರಜಾ ಪ್ರಭುತ್ವ ನಿರ್ಮಿಸಲು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪಾತ್ರ ಅಪಾರವಾಗಿತ್ತು. ಇದನ್ನು ದೇಶದ ಪ್ರತಿಯೊಬ್ಬ ಪ್ರಜೆ ಗೌರವಿಸಬೇಕಿದೆ. ಅವರ ಜನ್ಮ ದಿನವನ್ನು ಪ್ರತಿಯೊಬ್ಬರೂ ಆಚರಣೆ ಮಾಡಬೇಕು ಎಂದರು.
ಡಿಆರ್‌ಎಫ್‌ಒ ನಂದೀಶ್ ಮಾತನಾಡಿ, ಅಂಬೇಡ್ಕರ್ ಅವರು ಬರೆದ ಸಂವಿಧಾನ ಅಡಿಪಾಯದಲ್ಲಿ ದೇಶ ಮುನ್ನಡೆಯುತ್ತಿದೆ ಎಂದರು.
ವಕೀಲ ಮಹದೇವಸ್ವಾಮಿ, ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಮಾಜಿ ಅಧ್ಯಕ್ಷ ಮಹದೇವ ಪ್ರಸಾದ್, ಪ್ರಕಾಶ್ ಬಸ್ತೀಪುರ, ನಿವೃತ್ತ ಶಿಕ್ಷಕ ಶಿವಣ್ಣ, ಮರಡಿಗುಡ್ಡ ವೃಕ್ಷವನ ಸಂಘದ ಅಧ್ಯಕ್ಷ ಶಿವಮೂರ್ತಿ, ಕಾರ್ಯದರ್ಶಿ ಪಿ.ಕವಿರತ್ನಾ, ಉಪಾಧ್ಯಕ್ಷ ನಂಜುಂಡಸ್ವಾಮಿ, ಖಜಾಂಚಿ ದೊರೆರಾಜ್, ಮಹೇಶ್, ರೇವಣ್ಣ, ಸಂತೋಷ್, ಶಿವಕುಮಾರ್, ಚಾಮರಾಜನಗರ ಜಿಲ್ಲಾ ಬಾಸ್ಕೆಟ್ ಬಾಲ್ ಅಸೋಸಿಯೇಷನ್ ಕಾರ್ಯದರ್ಶಿ ಸುಮನ್, ರಾಜಶೇಖರ್, ಜಯಶಂಕರ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net