ಪಟ್ಟಣದ ಸಿಡಿಎಸ್ ಸಮುದಾಯ ಭವನಕ್ಕೆ ಭೇಟಿ ನೀಡಿ ದಾಸ್ತಾನು ಪರಿಶೀಲಿಸಿ ಮಾತನಾಡಿದ ನಯನಾ, ಪಟ್ಟಣ ಪಂಚಾಯಿತಿಯ ನಿಗದಿತ ಅನುದಾನದಲ್ಲಿ ಪರಿಶಿಷ್ಟ ಜಾತಿ ಹಾಗೂ ವರ್ಗಗಳ ಸಮುದಾಯ ಭವನಗಳಿಗೆ 4 ಲಕ್ಷ ರೂ. ವೆಚ್ಚದಲ್ಲಿ ಚೇರ್‌ಗಳು, ಪಾತ್ರೆಗಳು ಸೇರಿದಂತೆ ಇತರ ಪರಿಕರ ನೀಡಲಾಗಿದೆ. ಅಲ್ಲದೆ ಹಿಂದುಳಿದ ವರ್ಗಗಳ ಹಾಸ್ಟೆಲ್‌ಗಳಿಗೆ 60 ಸಾವಿರ ರೂ. ವೆಚ್ಚದಲ್ಲಿ ತಟ್ಟೆ, ಲೋಟ, ಬೆಡ್ ಶೀಟ್, ದಿಂಬು ಕವರ್‌ಗಳು ಸೇರಿದಂತೆ ಇತರ ವಸ್ತುಗಳನ್ನು ನೀಡಲಾಗುತ್ತಿದೆ. ಹಾಗಾಗಿ ಗುಣಮಟ್ಟದ ವಸ್ತುಗಳನ್ನು ನೀಡಬೇಕು. ಇದಕ್ಕೆ ನಿಗದಿತ ಬಿಲ್‌ಗಳನ್ನು ನಮೂದಿಸಬೇಕು. ಯಾವುದೇ ಕಾರಣಕ್ಕೂ ಗುಣಮಟ್ಟದಲ್ಲಿ ರಾಜಿಯಾಗಬಾರದು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.