ಗ್ರಾಮದ ಮೋಹನ್ ಅರುಳ್‌ರಾಜ್ ಅವರ ಹಸುವಿಗೆ ಶನಿವಾರ ಪ್ರಸವದ ವೇಳೆ ಕರುವಿನ ಕಾಲು ಮಾತ್ರ ಹೊರಕ್ಕೆ ಬಂದಿತ್ತು. ಹಲವು ಗಂಟೆಗಳ ಕಾಲ ಕಾದರೂ ಕರು ಹೊರ ಬಾರದೆ ಮೃತಪಟ್ಟಿತ್ತು. ಇದರಿಂದ ಹಸು ನಿತ್ರಾಣಗೊಂಡಿತ್ತು. ಮೋಹನ್ ಅವರು ಪಶು ವೈದ್ಯಾಧಿಕಾರಿ ಡಾ. ಶಿವರಾಜು ಅವರ ಗಮನಕ್ಕೆ ತಂದರು. ಬಳಿಕ ಪಶು ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ನಡೆಸಿ ಕರು ಹೊರ ತೆಗೆಯಲಾಯಿತು. ಹಸು ಆರೋಗ್ಯವಾಗಿದೆ ಎಂದು ಪಶು ವೈದ್ಯರು ತಿಳಿಸಿದ್ದಾರೆ.