ಕರಪತ್ರ ವಿತರಿಸಿ ಕಾರ್ಯಕ್ರಮಕ್ಕೆ ಆಹ್ವಾನ

ಮಂಗಲ ಗ್ರಾಮಕ್ಕೆ ಆಗಮಿಸಿದ ಡಾ.ಶಿವರಾತ್ರಿ ರಾಜೇಂದ್ರ ಶ್ರೀಗಳ ಜಯಂತಿ ಪ್ರಚಾರ ರಥದ ವೇಳೆ ಜನದನಿ ಬಿ.ವೆಂಕಟೇಶ್ ಅವರು ಕರಪತ್ರವನ್ನು ವಿತರಿಸಿದರು. ಶ್ರೀನಿವಾಸಮೂರ್ತಿ, ರಾಚಪ್ಪ, ವರಪ್ರಸಾದ್ ಇತರರು ಇದ್ದರು
ಮಂಗಲ ಗ್ರಾಮಕ್ಕೆ ಆಗಮಿಸಿದ ಡಾ.ಶಿವರಾತ್ರಿ ರಾಜೇಂದ್ರ ಶ್ರೀಗಳ ಜಯಂತಿ ಪ್ರಚಾರ ರಥದ ವೇಳೆ ಜನದನಿ ಬಿ.ವೆಂಕಟೇಶ್ ಅವರು ಕರಪತ್ರವನ್ನು ವಿತರಿಸಿದರು. ಶ್ರೀನಿವಾಸಮೂರ್ತಿ, ರಾಚಪ್ಪ, ವರಪ್ರಸಾದ್ ಇತರರು ಇದ್ದರು
Published on
ಹನೂರು: ಡಾ.ಶಿವರಾತ್ರಿ ರಾಜೇಂದ್ರ ಶ್ರೀಗಳ ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಭಾನುವಾರ ತಾಲೂಕಿನ ಮಂಗಲ ಗ್ರಾಮಕ್ಕೆ ಆಗಮಿಸಿದ ಪ್ರಚಾರ ರಥದ ವೇಳೆ ಬಿಜೆಪಿ ಒಬಿಸಿ ಮೋರ್ಚಾದ ಜಿಲ್ಲಾಧ್ಯಕ್ಷ ಜನದನಿ ಬಿ.ವೆಂಕಟೇಶ್ ಅವರು ಕರಪತ್ರವನ್ನು ವಿತರಿಸಿ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಮನವಿ ಮಾಡಿದರು.
ಈ ವೇಳೆ ಅವರು ಮಾತನಾಡಿ, ರಾಜೇಂದ್ರ ಶ್ರೀಗಳು ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಕಲ್ಪಿಸಿದ್ದಾರೆ. ಹಾಗಾಗಿ ತಾಲೂಕಿಗೆ ಇವರ ಕೊಡುಗೆ ಅಪಾರ. ಆದ್ದರಿಂದ ಶ್ರೀಗಳ ಜಯಂತಿಯನ್ನು ಎಲ್ಲ ಸಮುದಾಯದ ಜನತೆ ಜತೆಗೂಡಿ ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ. ಕಾರ್ಯಕ್ರಮವು ಡಿ.13 ರಂದು ಹನೂರಿನ ಶ್ರೀ ಮಲೆಮದೇಶ್ವರ ಕ್ರೀಡಾಂಗಣದಲ್ಲಿ ನಡೆಯಲಿದೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.
ಮುಖಂಡರಾದ ಶ್ರೀನಿವಾಸಮೂರ್ತಿ, ರಾಚಪ್ಪ, ವರಪ್ರಸಾದ್ ಹಾಗೂ ಇನ್ನಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net