ರೈತರಿಗೆ ದೇಸಿ ತಳಿ ಹಸುಗಳು ವಿತರಣೆ

ಕೌದಳ್ಳಿಯಲ್ಲಿ ಶ್ರೀ ರಾಮಚಂದ್ರಾಪುರ ಮಠದ ವತಿಯಿಂದ ರೈತರಿಗೆ ದೇಸಿ ತಳಿಯ ಹಸುಗಳನ್ನು ವಿತರಿಸಲಾಯಿತು. ಬಾಲಸುಬ್ರಮಣ್ಯ ಭಟ್, ಕುಮಾರ್, ಮುತ್ತಯ್ಯ ಇತರರಿದ್ದರು.
ಕೌದಳ್ಳಿಯಲ್ಲಿ ಶ್ರೀ ರಾಮಚಂದ್ರಾಪುರ ಮಠದ ವತಿಯಿಂದ ರೈತರಿಗೆ ದೇಸಿ ತಳಿಯ ಹಸುಗಳನ್ನು ವಿತರಿಸಲಾಯಿತು. ಬಾಲಸುಬ್ರಮಣ್ಯ ಭಟ್, ಕುಮಾರ್, ಮುತ್ತಯ್ಯ ಇತರರಿದ್ದರು.
Published on
ಹನೂರು: ತಾಲೂಕಿನ ಕೌದಳ್ಳಿಯಲ್ಲಿ ಶ್ರೀ ರಾಮಚಂದ್ರಾಪುರ ಮಠದ ಗೋ ಫಲ ಟ್ರಸ್ಟ್ ವತಿಯಿಂದ ಭಾನುವಾರ ರೈತರಿಗೆ 48 ದೇಸಿ ತಳಿ ಹಸುಗಳನ್ನು ವಿತರಿಸಲಾಯಿತು.
ಟ್ರಸ್ಟ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಾಲಸುಬ್ರಮಣ್ಯ ಭಟ್ ಮಾತನಾಡಿ, ಗೋ ದಾನ ಒಂದೆರೆಡು ದಿನಕ್ಕೆ ಮಾತ್ರ ಸೀಮಿತವಲ್ಲ. ನಿರಂತರ ಪ್ರಕ್ರಿಯೆಯಾಗಿದೆ. ದೇಸಿ ತಳಿಯ ಹಸುಗಳನ್ನು ಉಳಿಸಿ, ಬೆಳೆಸಬೇಕಾದುದು ಟ್ರಸ್ಟ್‌ನ ಉದ್ದೇಶವಾಗಿದೆ. ಹಾಗಾಗಿ ಶ್ರೀಗಳ ಇಚ್ಛೆಯಂತೆ ಮಠದ ವತಿಯಿಂದ ರೈತರಿಗೆ ದೇಸಿ ತಳಿಯ ಹಸುಗಳನ್ನು ವಿತರಿಸಲಾಗುತ್ತಿದೆ. ಈಗಾಗಲೇ ತಾಲೂಕಿನ ಕೊಪ್ಪ, ಶೆಟ್ಟಳ್ಳಿ, ಭದ್ರಯ್ಯನಹಳ್ಳಿ ಹಾಗೂ ಪೆದ್ದನಪಾಳ್ಯದಲ್ಲಿ ರೈತರಿಗೆ ಹಸುಗಳನ್ನು ವಿತರಿಸಲಾಗಿದ್ದು, ಇದೀಗ ಕೌದಳ್ಳಿಯಲ್ಲಿ ಈ ಕಾರ್ಯವನ್ನು ಕೈಗೊಳ್ಳಲಾಗಿದೆ. ಆದ್ದರಿಂದ ರೈತರು ಇದರ ಪ್ರಯೋಜನ ಪಡೆದುಕೊಂಡು ದೇಸಿ ತಳಿ ಹಸುಗಳ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕು. ಜತೆಗೆ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಇದೇ ವೇಳೆ ಅನಾರೋಗ್ಯಕ್ಕೆ ತುತ್ತಾಗುವ ದೇಸಿ ಹಸುಗಳ ಚಿಕಿತ್ಸೆಗೆ ಹೋಮಿಯೋಪತಿ ಔಷಧ ವಿತರಿಸಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟ್‌ನ ಕೌದಳ್ಳಿ ಘಟಕ ವ್ಯವಸ್ಥಾಪಕ ಕುಮಾರ್, ರೈತ ಸಂಪರ್ಕ ಅಧಿಕಾರಿ ಮುತ್ತಯ್ಯ ಇನ್ನಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net