ಈ ವೇಳೆ ವಾಯುವಿನಿಂಧ ನೀರನ್ನು ಉತ್ಪಾದಿಸುವ ಏರ್ ಟು ವಾಟರ್ ಪ್ಲ್ಯಾಂಟ್ಸ್‌ಗಳನ್ನು ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಸ್ಥಾಪಿಸುವ ಸಾಧ್ಯತೆ, ಅದರ ಕಾರ್ಯಕ್ಷಮತೆ, ವೆಚ್ಚ ಮತ್ತು ಪರಿಸರ ಸ್ನೇಹಿ ತಂತ್ರಜ್ಞಾನ ಕುರಿತು ವಿವರವಾದ ಪ್ರಸ್ತುತೀಕರಣವನ್ನು ನಡೆಸಲಾಯಿತು. ಬರ ಮತ್ತು ಭೂಗರ್ಭಜಾಲ ಕುಸಿತದಿಂದ ಬಳಲುತ್ತಿರುವ ಜಿಲ್ಲೆಯಲ್ಲಿ ಇಂತಹ ಆಧುನಿಕ ತಂತ್ರಜ್ಞಾನವು ಭವಿಷ್ಯದಲ್ಲಿ ಕುಡಿಯುವ ನೀರಿನ ಭದ್ರತೆಗೆ ಕ್ರಾಂತಿಕಾರಿ ಪರಿಹಾರವಾಗಬಹುದು ಎಂಧು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.