ಮದ್ಯ ಅಕ್ರಮ ಮಾರಾಟ ತಡೆಗೆ ಒತ್ತಾಯ

ಸತ್ತೇಗಾಲ ಡಾ.ಬಿ.ಆರ್ ಅಂಬೇಡ್ಕರ್ ವಿವಿಧ ಸಂಘಟನೆಗಳ ಒಕ್ಕೂಟದ ಸದಸ್ಯರು  ಅಕ್ರಮ ಮದ್ಯ ತಡೆಗಟ್ಟುವಂತೆ ಕೊಳ್ಳೇಗಾಲದ ಅಬಕಾರಿ ಸಬ್‌ಇನ್‌ಸ್ಪೆಕ್ಟರ್ ನಾಗರಾಜು ಅವರಿಗೆ ಮನವಿಪತ್ರ ಸಲ್ಲಿಸಿದರು.
ಸತ್ತೇಗಾಲ ಡಾ.ಬಿ.ಆರ್ ಅಂಬೇಡ್ಕರ್ ವಿವಿಧ ಸಂಘಟನೆಗಳ ಒಕ್ಕೂಟದ ಸದಸ್ಯರು ಅಕ್ರಮ ಮದ್ಯ ತಡೆಗಟ್ಟುವಂತೆ ಕೊಳ್ಳೇಗಾಲದ ಅಬಕಾರಿ ಸಬ್‌ಇನ್‌ಸ್ಪೆಕ್ಟರ್ ನಾಗರಾಜು ಅವರಿಗೆ ಮನವಿಪತ್ರ ಸಲ್ಲಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಅಬಕಾರಿ ಸಬ್ ಇನ್‌ಸ್ಪೆಕ್ಟರ್‌ಗೆ ಮನವಿ ಸಲ್ಲಿಕೆ
ಕೊಳ್ಳೇಗಾಲ: ಮದ್ಯ ಅಕ್ರಮ ಮಾರಾಟ ತಡೆಗಟ್ಟಬೇಕೆಂದು ಸತ್ತೇಗಾಲ ಗ್ರಾಮದ ಮುಖಂಡರು, ವಿವಿಧ ಸಂಘಟನೆಯ ಪದಾಧಿಕಾರಿಗಳು ಶನಿವಾರ ಪಟ್ಟಣದ ಅಬಕಾರಿ ನಿರೀಕ್ಷಕರ ಕಚೇರಿಗೆ ತೆರಳಿ ಎಸ್‌ಐ ನಾಗರಾಜು ಅವರಿಗೆ ಮನವಿ ಪತ್ರ ನೀಡಿ ಒತ್ತಾಯಿಸಿದರು.
ಮನೆಗಳಲ್ಲಿ ಹಾಗೂ ಅಂಗಡಿಗಳಲ್ಲಿ ಮದ್ಯ ಅಕ್ರಮ ಮಾರಾಟ ನಡೆಯುತ್ತಿದ್ದು, ಯುವಕರು ಮತ್ತು ಕೂಲಿ ಕಾರ್ಮಿಕರು ಮದ್ಯ ಸೇವಿಸಿ ಸಾವು-ನೋವುಗಳು, ಅನಾರೊಗ್ಯಕ್ಕೆ ತುತ್ತಾಗುತ್ತಿದ್ದಾರೆ. ಬೆಳಗ್ಗೆ 5 ಗಂಟೆಯಿಂದ ಮಧ್ಯರಾತ್ರಿವರೆಗೂ ಮದ್ಯ ಅಕ್ರಮ ಮಾರಾಟ ನಡೆಯುತ್ತಿದೆ. ಕೂಲಿ ಕಾರ್ಮಿಕರು ದುಡಿದ ಹಣವೆಲ್ಲ ಕುಡಿತಕ್ಕೆ ಖರ್ಚು ಮಾಡಿ ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ. ಸತ್ತೇಗಾಲ ಹ್ಯಾಂ ಡ್ ಪೋಸ್ಟ್ ನಲ್ಲಿರುವ ವೈನ್ ಸ್ಟೋರ್‌ನಿಂದ ಮದ್ಯವನ್ನು ದೊಡ್ಡ ದೊಡ್ಡ ಬ್ಯಾಗ್‌ಗಳಲ್ಲಿ ತುಂಬಿ ಕೊಂಡು ಅಲ್ಲಿನ ನೌಕರರುಗಳ ಮೂಲಕ ಬೈಕ್‌ಗಳಲ್ಲಿ ಪೆಟ್ಟಿ ಅಂಗಡಿಗಳಿಗೆ ಮತ್ತು ಇನ್ನಿತರೆ ಮದ್ಯ ಅಕ್ರಮ ಮಾರಾಟ ಮಾಡುವ ಸ್ಥಳಗಳಿಗೆ ಸಾಗಣೆ ಮಾಡಲಾಗುತ್ತಿದೆ. ಮೊದಲು ವೈನ್ ಸ್ಟೋರ್ ನಿಂದ ಅಕ್ರಮ ಹೊರತರಲು ಕಟ್ಟು ನಿಟ್ಟು ಕ್ರಮ ಕೈಗೊಳ್ಳಬೇಕು. ಇದನ್ನು ನಿರ್ಲಕ್ಷಿಸಿದರೆ ಮಹಿಳೆಯರು ಮತ್ತು ಸತ್ತೇಗಾಲ ಡಾ.ಬಿ.ಆರ್ ಅಂಬೇಡ್ಕರ್ ವಿವಿಧ ಸಂಘಟನೆಗಳ ಒಕ್ಕೂಟ ಕೊಳ್ಳೇಗಾಲ ಅಬಕಾರಿ ಕಚೇರಿ ಮುಂದೆ ಪೊರಕೆ ಚಳವಳಿ ನಡೆಸಿ ಅಹೋರಾತ್ರಿ ಧರಣಿ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮುಖಂಡರಾದ ಪುಟ್ಟಸ್ವಾಮಿ, ಮಲ್ಲೇಶ್, ಸಿದ್ದರಾಜು, ಶಾಂತರಾಜು, ಉಪೇಂದ್ರ, ನಾಗರಾಜು, ಅವಿನಾಶ್, ಮಹಾಲಿಂಗ, ಗೋವಿಂದರಾಜು, ರವಿ ನಾಗೇಂದ್ರ ಬಾಬು, ದರ್ಶನ್, ಪ್ರಭುಸ್ವಾಮಿ ಶಿವಲಿಂಗಯ್ಯ, ಪ್ರಭು, ರಮೇಶ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net