ಶ್ರೀರಂಗನಾಥಸ್ವಾಮಿಗೆ ಡಿಸಿಎಂ ಡಿ.ಕೆ.ಶಿವಕುಮಾರ್-ಪತ್ನಿ ಉಷಾ ಶಿವಕುಮಾರ್ ಅವರು ಸಂಕಲ್ಪ ಪೂಜೆ ಸಲ್ಲಿಸಿದರು. ಮೇ 17ರಿಂದ 21ರವರೆಗೆ ದೇವಾಲಯದಲ್ಲಿ ಪಂಚರಾತ್ರಗಮ ಶಾಸ್ತ್ರದಂತೆ ಪೂಜೆ ನೆರವೇರಿಸಲಾಯಿತು. ಲೋಕಾರ್ಪಣೆ ದಿನ ದೇವರಿಗೆ ಕ್ಷೀರಾಭಿಷೇಕ, ಪೂರ್ಣಾಹುತಿ, ಕುಂಭ ಪ್ರತಿಷ್ಠಾಪನೆ, ಮಹಾಕುಂಭ ಸಂಪ್ರೋಕ್ಷಣೆ, ಮಹಾ ಮಂಗಳಾರತಿ ಇನ್ನಿತರ ಪೂಜಾ ಕೈಂಕರ್ಯಗಳು ನೆರವೇರಿದವು. ವೇದ ವಿದ್ವಾಂಸರು, ಆಗಮನ ವಿದ್ವಾಂಸರು, ದಿವ್ಯ ಪ್ರಬಂಧ ವಿದ್ವಾಂಸರು ದೇವರ ಪರಾಯಣ ಮಾಡಿ ಪೂಜೆ ಸಲ್ಲಿಸಿದರು. ಎಲ್ಲ ಪೂಜೆ ಕಾರ್ಯಗಳು ಕೆ.ಶ್ರೀನಿವಾಸ್ ರಂಗಾಚಾರ್ಯರು, ಕೆ.ಶ್ರೀಧರ್, ಕೆ.ಮಧುಸೂದನ್, ಕೆ.ಮಾಧವನ್ ಭಟ್ ನೇತೃತ್ವದಲ್ಲಿ ನೆರವೇರಿತು.