ಅಗತ್ಯಬಿದ್ದಲ್ಲಿ ಹೊಸದಾಗಿ ಕೊಳವೆಬಾಯಿ ಕೊರೆದು ಸಮರ್ಪಕವಾಗಿ ನೀರು ಪೂರೈಸುವ ಸಾಧ್ಯತೆ ಬಗ್ಗೆಯೂ ಪರಿಶೀಲಿಸುವಂತೆ ಜಿಲ್ಲಾಧಿಕಾರಿಯವರು ನಿರ್ದೇಶನ ನೀಡಿದರು. ಮುಖ್ಯ ಒಳಚರಂಡಿಗೆ ಮನೆಮನೆಗಳ ಚರಂಡಿ ಜೋಡಣೆ ಕಾರ್ಯವನ್ನು ಆದಷ್ಟು ಬೇಗನೆ ಕೈಗೊಳ್ಳಲು ಸೂಚಿಸಲಾಗುವುದು. ಇದರಿಂದ ಚರಂಡಿ ಸಂಬಂಧ ಸಮಸ್ಯೆಗಳು ಪರಿಹಾರವಾಗಲಿವೆ ಎಂದ ಜಿಲ್ಲಾಧಿಕಾರಿಯವರು ಸ್ಥಳೀಯ ಪ್ರದೇಶದ ಚರಂಡಿಯೊಂದರ ನೀರು ಖಾಸಗಿ ಜಮೀನಿಗೆ ಸೇರುತ್ತಿದ್ದು, ಇದನ್ನು ಸರಿಪಡಿಸಿಕೊಳ್ಳುವಂತೆ ನಿವಾಸಿಗಳು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಈ ಬಗ್ಗೆ ಕ್ರಮವಹಿಸುವ ಕುರಿತು ಎಂಜಿನಿಯರ್ ಅವರಿಗೆ ಸೂಚಿಸಿದರು.