ಡೇರಿ ಚುನಾವಣೆ ಮಹದೇವಸ್ವಾಮಿ, ಸರೋಜಮ್ಮ ಆಯ್ಕೆ

 ಚಾಮರಾಜನಗರ ತಾಲೂಕಿನ  ಮರಿಯಾಲ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಗುರುಸಿದ್ದಪ್ಪನವರ ಮಗ ಮಹದೇವಸ್ವಾಮಿ, ಉಪಾಧ್ಯಕ್ಷರಾಗಿ ಸರೋಜಮ್ಮ  ಆಯ್ಕೆಯಾದರು.
ಚಾಮರಾಜನಗರ ತಾಲೂಕಿನ ಮರಿಯಾಲ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಗುರುಸಿದ್ದಪ್ಪನವರ ಮಗ ಮಹದೇವಸ್ವಾಮಿ, ಉಪಾಧ್ಯಕ್ಷರಾಗಿ ಸರೋಜಮ್ಮ ಆಯ್ಕೆಯಾದರು.
Published on

ಪ್ರಮುಖ ಮುಖ್ಯಾಂಶಗಳು

  • ಮರಿಯಾಲ ಗ್ರಾಮದ ಡೇರಿಗೆ ಚುನಾವಣೆ
  • ಎರಡನೇ ಬಾರಿಗೆ ಗೆದ್ದ ಮಹದೇವಸ್ವಾಮಿ
ಚಾಮರಾಜನಗರ: ತಾಲೂಕಿನ ಮರಿಯಾಲ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎರಡನೇ ಬಾರಿಗೆ ಮಹದೇವಸ್ವಾಮಿ, ಉಪಾಧ್ಯಕ್ಷರಾಗಿ ಸರೋಜಮ್ಮ ಶುಕ್ರವಾರ ಆಯ್ಕೆಯಾದರು.
ಗ್ರಾಮದ ಡೇರಿ ಸಭಾಂಗಣದಲ್ಲಿ ನಡೆದ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಗುರುಸಿದ್ದಪ್ಪನವರ ಮಗ ಮಹದೇವಸ್ವಾಮಿ ಹಾಗೂ ಮಹದೇವಸ್ವಾಮಿ ನಾಮಪತ್ರ ಸಲ್ಲಿಸಿದ್ದರೆ, ಉಪಾಧ್ಯಕ್ಷ ಸ್ಥಾನಕ್ಕೆ ಸರೋಜಮ್ಮ ಅವರೊಬ್ಬರೇ ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ ಸರೋಜಮ್ಮ ಅವಿರೋಧವಾಗಿ ಆಯ್ಕೆಯಾದರು. ಬಳಿಕ ಅಧ್ಯಕ್ಷ ಸ್ಥಾನಕ್ಕೆ ನಡೆದ ಮತದಾನದಲ್ಲಿ ಗುರುಸಿದ್ದಪ್ಪನವರ ಮಗ ಮಹದೇವಸ್ವಾಮಿ 7 ಮತಗಳನ್ನು ಪಡೆದು 2ನೇ ಬಾರಿ ಅಧ್ಯಕ್ಷರಾಗಿ ಆಯ್ಕೆಯಾದರೆ, ಮತ್ತೊಬ್ಬ ಮಹದೇವಸ್ವಾಮಿ 4 ಮತಗಳನ್ನು ಪಡೆದುಕೊಂಡು ಪರಾಭವಗೊಂಡರು.
ಚುನಾವಣಾಧಿಕಾರಿಯಾಗಿದ್ದ ಸಹಕಾರ ಇಲಾಖೆಯ ಶಿಲ್ಪಾ ಕರ್ತವ್ಯ ನಿರ್ವಹಿಸಿದರು. ಸಂಘದ ನಿರ್ದೇಶಕರಾದ ಮಾದಪ್ಪ, ಕಾಳಸ್ವಾಮಿ, ಸುಂದರ್, ಬಸವನಾಯಕ, ಮಾದೇಶ್, ರತ್ನಮ್ಮ, ಪ್ರಮೀಳಾ, ಮುದ್ದಮಾದಪ್ಪ ಕಾರ್ಯನಿರ್ವಾಹಕ ಅಧಿಕಾರಿ ಶಿವಸ್ವಾಮಿ, ನೌಕರರಾದ ಶೇಖರ್, ಎಂ.ಎಸ್. ಹರ್ಷ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net