ಈ ಸಂದರ್ಭ ಮಾತನಾಡಿದ ಪಂದ್ಯಾವಳಿ ಆಯೋಜಕ ಪ್ರಜ್ವಲ್, 8 ತಂಡಗಳು ಸೆಣಸಲಿರುವ ಎಂಟು ಸೀಮಿತ ಓವರ್ ಪಂದ್ಯವು 3 ದಿನಗಳ ಕಾಲ ನಡೆಯಲಿದೆ ಎಂದರು. ಅಂತಿಮ ಪಂದ್ಯ ಗೆದ್ದ ತಂಡಕ್ಕೆ ಪ್ರಥಮ ಬಹುಮಾನವಾಗಿ ಒಂದು ಲಕ್ಷ ರೂ. ನಗದು ಹಾಗೂ ಟ್ರೋಫಿ, ರನ್ನರ್ ತಂಡಕ್ಕೆ 50 ಸಾವಿರ ರೂ. ನಗದು ಮತ್ತು ಟ್ರೋಫಿ ನೀಡಲಾಗುವುದು ಎಂದರು. ಇದರೊಂದಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ, ಸರಣಿ ಶ್ರೇಷ್ಠ ಪ್ರಶಸ್ತಿ, ಬೆಸ್ಟ್ ಬೋಲರ್, ಬೆಸ್ಟ್ ಬ್ಯಾಟ್ಸ್‌ಮನ್ ಪ್ರಶಸ್ತಿಗಳನ್ನೂ ನೀಡಲಾಗುವುದು ಎಂದರು.