ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛತೆ, ಆರೋಗ್ಯದ ಅರಿವು ಮೂಡಿಸಿ

ಯಳಂದೂರು ತಾಲೂಕಿನ ಮಲಾರಪಾಳ್ಯ ಗ್ರಾಮದಲ್ಲಿ ಆಯೋಜಿಸಿದ್ದ ವಿಶೇಷ ವಾರ್ಷಿಕ ಶಿಬಿರ ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕುವುದರ ಮೂಲಕ ತಹಸೀಲ್ದಾರ್ ನಯನಾ ಉದ್ಘಾಟಿಸಿದರು. ಗೌಡಹಳ್ಳಿ ವಿರಕ್ತ ಮಠದ ಶ್ರೀ ಮರಿತೋಂಟದಾರ್ಯ ಸ್ವಾಮೀಜಿ ಇತರರು ಇದ್ದರು.
ಯಳಂದೂರು ತಾಲೂಕಿನ ಮಲಾರಪಾಳ್ಯ ಗ್ರಾಮದಲ್ಲಿ ಆಯೋಜಿಸಿದ್ದ ವಿಶೇಷ ವಾರ್ಷಿಕ ಶಿಬಿರ ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕುವುದರ ಮೂಲಕ ತಹಸೀಲ್ದಾರ್ ನಯನಾ ಉದ್ಘಾಟಿಸಿದರು. ಗೌಡಹಳ್ಳಿ ವಿರಕ್ತ ಮಠದ ಶ್ರೀ ಮರಿತೋಂಟದಾರ್ಯ ಸ್ವಾಮೀಜಿ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಯುವ ಜನರಿಗೆ ತಹಸೀಲ್ದಾರ್ ನಯನಾ ಸಲಹೆ
  • ಮಲಾರಪಾಳ್ಯ ಗ್ರಾಮದಲ್ಲಿ ಎನ್‌ಎಸ್‌ಎಸ್ ವಿಶೇಷ ವಾರ್ಷಿಕ ಶಿಬಿರ
ಯಳಂದೂರು: ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛತೆ, ಶಿಕ್ಷಣ, ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳ ಬಗ್ಗೆ ಜನರಿಗೆ ಯುವ ಜನರು ಅರಿವು ಮೂಡಿಸುವ ಕೆಲಸ ನಿರಂತರವಾಗಿ ಮಾಡಬೇಕೆಂದು ತಹಸೀಲ್ದಾರ್ ನಯನಾ ಸಲಹೆ ನೀಡಿದರು.
ತಾಲೂಕಿನ ಮಲಾರಪಾಳ್ಯ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ, ಜೆಎಸ್‌ಎಸ್ ಮಹಾವಿದ್ಯಾಪೀಠ, ಕೊಳ್ಳೇಗಾಲದ ಜೆಎಸ್‌ಎಸ್ ಮಹಿಳಾ ಕಾಲೇಜು ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ 2025-26ನೇ ಸಾಲಿನ ವಿಶೇಷ ವಾರ್ಷಿಕ ಶಿಬಿರ ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕುವುದರ ಮೂಲಕ ಉದ್ಘಾಟಸಿ ಮಾತನಾಡಿದರು.
ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಾರ್ಥಿಗಳಿಗೆ ಸ್ನೇಹ-ಸಹಬಾಳ್ವೆ-ಶ್ರಮದಾನ-ಭಾವೈಕ್ಯದೊಂದಿಗೆ ಗ್ರಾಮದ ಜತೆ ಸಾಮಾಜಿಕವಾಗಿ ಹೊಂದಾಣಿಕೆಯಾಗುವುದರ ಮೂಲಕ ಗ್ರಾಮಗಳ ಸ್ವಚ್ಛತೆ , ಬಾಲ್ಯ ವಿವಾಹ ತಡೆ, ಆರೋಗ್ಯ, ಶಿಕ್ಷಣದ ಅರಿವು ಮೂಡಿಸುವ ಕೆಲಸ ನಿಮ್ಮಿಂದಾಗುತ್ತದೆ, ಗ್ರಾಮಗಳು ಬದಲಾದರೆ, ತಾಲೂಕು ಮತ್ತು ಜಿಲ್ಲೆಗಳು ಬದಲಾವಣೆಯಾಗುತ್ತದೆ ಎಂದು ತಿಳಿಸಿದರು.
ಗೌಡಹಳ್ಳಿ ವಿರಕ್ತ ಮಠದ ಶ್ರೀ ಮರಿತೋಂಟದಾರ್ಯ ಸ್ವಾಮೀಜಿ, ಕಾಲೇಜು ಶಿಕ್ಷಣ ಇಲಾಖೆ ಸಹಾಯಕ ನಿರ್ದೇಶಕ ಎ.ಬಿ. ನಾಗೇಂದ್ರ ಪ್ರಸಾದ್, ಪ್ರಾಂಶುಪಾಲ ಡಾ.ಎಚ್.ಎಸ್.ಕೊಂಗಳಪ್ಪ, ಮುಖ್ಯ ಶಿಕ್ಷಕ ಮಹದೇವಪ್ರಸಾದ್, ಎಸ್.ಡಿ.ಎಂ.ಸಿ.ಅಧ್ಯಕ್ಷ ಕರುಣಾಕರ್, ಗ್ರಾಮದ ಮುಖಂಡರಾದ ಸುರೇಶ್, ಮಹೇಶ್, ಪ್ರದೀಪ್, ಬಸವರಾಜು, ಶಿಬಿರಾಧಿಕಾರಿ ಮಂಜಪ್ಪ, ಸಹಶಿಬಿರಾಧಿಕಾರಿ ಮಹೇಶ್, ಪ್ರಕಾಶ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net