ತಾಳೆ ಗರಿ ಸಂಗ್ರಹಕ್ಕೆ ಅಗತ್ಯ ಸಹಕಾರ

 ಚಾಮರಾಜನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗದ ಉದ್ಯಾನದಲ್ಲಿ ಜಿಲ್ಲಾಧಿಕಾರಿ ಶ್ರೀರೂಪಾ ಅವರಿಗೆ  ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಬಿ.ಆರ್.ಜಯಣ್ಣಗೆ ತಾಳೆ ಗರಿ ಸಂಗ್ರಹದ ಕುರಿತು ವಿವರಿಸುವಾಗ ವಿಜಯವಾಣಿ ಪತ್ರಿಕೆಯ ವಿಶೇಷ ವರದಿಯನ್ನು ತೋರಿಸಿದರು.
ಚಾಮರಾಜನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗದ ಉದ್ಯಾನದಲ್ಲಿ ಜಿಲ್ಲಾಧಿಕಾರಿ ಶ್ರೀರೂಪಾ ಅವರಿಗೆ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಬಿ.ಆರ್.ಜಯಣ್ಣಗೆ ತಾಳೆ ಗರಿ ಸಂಗ್ರಹದ ಕುರಿತು ವಿವರಿಸುವಾಗ ವಿಜಯವಾಣಿ ಪತ್ರಿಕೆಯ ವಿಶೇಷ ವರದಿಯನ್ನು ತೋರಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಇತಿಹಾಸ ವಿಭಾಗದ ಮುಖ್ಯಸ್ಥ ಜಯಣ್ಣ ಕಾರ್ಯಕ್ಕೆ ಡಿಸಿ ಶ್ರೀರೂಪಾ ಮೆಚ್ಚುಗೆ
  • ಜಯಣ್ಣ ಅವರು ತಾಳೆ ಗರಿಯನ್ನು ಸಂಗ್ರಹ ಮಾಡುತ್ತಿರುವ ಬಗ್ಗೆ ಮಾಹಿತಿ ನೀಡಿದರು.
ಚಾಮರಾಜನಗರ: ಅಪರೂಪದ ತಾಳೆ ಗರಿಗಳನ್ನು ಸಂಗ್ರಹ ಮಾಡುತ್ತಿರುವ ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಬಿ.ಆರ್.ಜಯಣ್ಣಗೆ ಅಗತ್ಯ ಸಹಕಾರ ನೀಡುವುದಾಗಿ ಜಿಲ್ಲಾಧಿಕಾರಿ ಶ್ರೀರೂಪಾ ತಿಳಿಸಿದರು.
ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗದ ಉದ್ಯಾನಕ್ಕೆ ಬುಧವಾರ ಮುಂಜಾನೆ ಡಿಸಿ ಶ್ರೀರೂಪಾ ಭೇಟಿ ನೀಡಿದ್ದರು. ಈ ವೇಳೆ ಜಯಣ್ಣ ಅವರು ತಾಳೆ ಗರಿಯನ್ನು ಸಂಗ್ರಹ ಮಾಡುತ್ತಿರುವ ಬಗ್ಗೆ ಮಾಹಿತಿ ನೀಡಿದರು. ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿಯಲ್ಲಿ ಏ.1ರಂದು ‘ಅಪರೂಪದ ತಾಳೆಗರಿಗಳ ಸಂಗ್ರಹ’ ಶೀರ್ಷಿಕೆಯಡಿ ಪ್ರಕಟಗೊಂಡ ವಿಶೇಷ ವರದಿಯನ್ನು ತೋರಿಸಿ ವಿವರಿಸಿದರು. ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಡಿಸಿ ಶ್ರೀರೂಪಾ ನಿಮ್ಮ ಕಾರ್ಯಕ್ಕೆ ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದರು.
ಜ್ಞಾನ ಭಾರತಂ ಮಿಷನ್ ಯೋಜನೆಯಡಿ ಆಧುನಿಕ ತಂತ್ರಜ್ಞಾನದ ಮೂಲಕ ಹಸ್ತಪ್ರತಿಗಳ ಸಮೀಕ್ಷೆಯನ್ನು ನಡೆಸುತ್ತಿದ್ದೇವೆ. ಇದಕ್ಕೆ ನಿಮ್ಮ ಬಳಿ ಇರುವ ಹಸ್ತಪ್ರತಿಗಳ ಮಾಹಿತಿಯನ್ನು ನೀಡಬಹುದು ಎಂದು ತಿಳಿಸಿದರು. ಇದಕ್ಕೆ ಜಯಣ್ಣ ಪ್ರತಿಕ್ರಿಯಿಸಿ, ನಾನು ಚಾಮರಾಜನಗರ ವಿಶ್ವ ವಿದ್ಯಾಲಯದ ಸಹಕಾರ ಪಡೆದುಕೊಂಡು ಹಸ್ತಪ್ರತಿ ಸಂಗ್ರಹ ಮಾಡುತ್ತಿದ್ದೇನೆ ಎಂದು ತಿಳಿಸಿದರು. ಡಿಸಿ ಶ್ರೀರೂಪಾ ಅವರ ಸೂಚನೆ ಮೇರೆಗೆ ಜಯಣ್ಣ ಬುಧವಾರ ಮಧ್ಯಾಹ್ನ ಜಿಲ್ಲಾಧಿಕಾರಿ ಕಚೇರಿಗೆ ಮತ್ತೆ ಡಿಸಿಯವರನ್ನು ಭೇಟಿ ಮಾಡಿದರು. ಅವರಿಗೆ ಇನ್ನು ಮಾಹಿತಿಗಳನ್ನು ನೀಡಿ ಜಿಲ್ಲಾಡಳಿತದಿಂದ ಅಗತ್ಯ ಸಹಕಾರ ನೀಡುವ ಭರವಸೆಯನ್ನು ಪಡೆದುಕೊಂಡರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net