ಎಸ್ಸೆಸ್ಸೆಲ್ಸಿ ಪರೀಕ್ಷೆ ಉತ್ತಮಗೊಳಿಸಲು ಅವಿರತ ಶ್ರಮ

ಯಳಂದೂರು ತಾಲೂಕಿನ ಮೆಳ್ಳಹಳ್ಳಿ ಗ್ರಾಮದ ಸರ್ಕಾರಿ ಆದರ್ಶ ಶಾಲೆಯಲ್ಲಿ ಶುಕ್ರವಾರ ಸೇವಾ ನಿವೃತ್ತಿ ಹೊಂದಿದ ಮುಖ್ಯಶಿಕ್ಷಕ ಗುರುಮೂರ್ತಿ ಅವರಿಗೆ ವಿವಿಧ ಶಾಲೆಗಳ ಶಿಕ್ಷಕರು ಸನ್ಮಾನಿಸಿ ಬೀಳ್ಕೂಟ್ಟರು. ರವಿಕುಮಾರ್, ನಂಜುಂಡಯ್ಯ, ಕಿರಣ್, ನಂಜುಂಡಸ್ವಾಮಿ, ಶಿವಲಂಕಾರ್, ಪ್ರಕಾಶ್, ಪ್ರಮೋದ್ ಇತರರಿದ್ದರು.
ಯಳಂದೂರು ತಾಲೂಕಿನ ಮೆಳ್ಳಹಳ್ಳಿ ಗ್ರಾಮದ ಸರ್ಕಾರಿ ಆದರ್ಶ ಶಾಲೆಯಲ್ಲಿ ಶುಕ್ರವಾರ ಸೇವಾ ನಿವೃತ್ತಿ ಹೊಂದಿದ ಮುಖ್ಯಶಿಕ್ಷಕ ಗುರುಮೂರ್ತಿ ಅವರಿಗೆ ವಿವಿಧ ಶಾಲೆಗಳ ಶಿಕ್ಷಕರು ಸನ್ಮಾನಿಸಿ ಬೀಳ್ಕೂಟ್ಟರು. ರವಿಕುಮಾರ್, ನಂಜುಂಡಯ್ಯ, ಕಿರಣ್, ನಂಜುಂಡಸ್ವಾಮಿ, ಶಿವಲಂಕಾರ್, ಪ್ರಕಾಶ್, ಪ್ರಮೋದ್ ಇತರರಿದ್ದರು.
Published on
ಯಳಂದೂರು: ತಾಲೂಕಿನ ಮೆಳ್ಳಹಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಆದರ್ಶ ಶಾಲೆಯ ಮುಖ್ಯ ಶಿಕ್ಷಕ ಗುರುಮೂರ್ತಿರವರಿಗೆ ಶಾಲೆಯ ಸಿಬ್ಬಂಧಿ ಹಾಗೂ ವಿವಿಧ ಶಿಕ್ಷಕ ಸಂಘಟನೆಗಳು, ಸಾರ್ವಜನಿಕರು ಶುಕ್ರವಾರ ಹೃದಯಸ್ಪರ್ಶಿ ಬೀಳ್ಕೂಡುಗೆ ನೀಡಿದರು.
ಸರ್ಕಾರಿ ಪಬ್ಲಿಕ್ ಶಾಲೆಯ ಉಪಪ್ರಾಂಶುಪಾಲ ನಂಜುಂಡಯ್ಯ ಮಾತನಾಡಿ, ಗುರುಮೂರ್ತಿ 33 ವರ್ಷಗಳ ತಮ್ಮ ಶಿಕ್ಷಕ ವೃತ್ತಿಯ ಸುದೀರ್ಘ ಸೇವೆಯಲ್ಲಿ ಶಾಲೆಯಲ್ಲಿ ಎಲ್ಲ ಶಿಕ್ಷಕರನ್ನು ಸಮಾನವಾಗಿ ಕಂಡಿದ್ದಾರೆ. ಆದರ್ಶ ಶಾಲೆಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ನೀಡಲು ಇವರ ಶ್ರಮ ಅವಿರತರವಾಗಿದೆ. ಇವರು ಶಾಲೆಯ ಮಕ್ಕಳನ್ನು ತಮ್ಮ ಮಕ್ಕಳಂತೆ ಪರಿಗಣಿಸಿ ಪ್ರತಿ ಮಕ್ಕಳು ಮೇಲೂ ನಿಗಾ ಇರಿಸುವ ಜತೆಗೆ, ಅವರಿಗೆ ಉತ್ತಮ ಮಾರ್ಗದರ್ಶನ ನೀಡಿ ದೇಶದ ಸತ್ಪ್ರಜೆಗಳಾಗಿ ರೂಪಿಸಲು ಅಪರಿಮಿತ ಶ್ರಮವನ್ನು ಹಾಕಿದ್ದಾರೆ ಎಂದರು.
ಅಭಿನಂದನೆ ಸ್ವೀಕರಿಸಿದ ಗುರುಮೂರ್ತಿ ಮಾತನಾಡಿ, ನಾನು ಸಕಲೇಶಪುರ ತಾಲೂಕಿನ ಹಾನುಬಾಲು ಎಂಬಲ್ಲಿ ಶಿಕ್ಷಕ ವೃತ್ತಿಯನ್ನು ಆರಂಭಿಸಿದೆ. 2014ರಂದು ಯಳಂದೂರು ಸರ್ಕಾರಿ ಆದರ್ಶ ಶಾಲೆಗೆ ಮುಖ್ಯಶಿಕ್ಷಕನಾಗಿ 13 ವರ್ಷಗಳವರೆಗೆ ಸುದೀರ್ಘ ಕೆಲಸವನ್ನು ಮಾಡಿದ್ದೇನೆ. ನನಗೆ ಕೆಲಸ ಮಾಡಿದ ತೃಪ್ತಿ ಇದೆ. ನನ್ನ ಈ ಅವಧಿಯಲ್ಲಿ ಎಲ್ಲ ಸರ್ಕಾರಿ ನೌಕರ ಸಂಘಟನೆಗಳು, ಶಿಕ್ಷಕ ಸಂಘಟನೆಗಳು, ಇಲಾಖೆಯ ಅಧಿಕಾರಿಗಳು ಎಲ್ಲಕ್ಕಿಂತ ಮಿಗಿಲಾಗಿ ನನ್ನ ಸಹದ್ಯೋಗಿಗಳು, ವಿದ್ಯಾರ್ಥಿಗಳು ನನಗೆ ಹೆಚ್ಚಿನ ಸಹಕಾರ ನೀಡಿದ್ದಾರೆ. ಇಲ್ಲಿ ಶಿಕ್ಷಣ ಪಡೆದ ನನ್ನ ವಿದ್ಯಾರ್ಥಿಗಳು ಇಂದು ಉನ್ನತ ಹುದ್ದೆಯಲ್ಲಿರುವುದು ನನಗೆ ಅತೀವ ಸಂತಸ ತಂದಿದೆ. ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ಸಿಗುತ್ತದೆ. ನುರಿತ ಶಿಕ್ಷಕರು ಇಲ್ಲಿರುತ್ತಾರೆ. ಹಾಗಾಗಿ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು ಎಂದು ಪಾಲಕರಿಗೆ ಕರೆ ನೀಡಿದರು.
ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ವೀರಭದ್ರಸ್ವಾಮಿ ಮಾತನಾಡಿದರು. ಸರ್ಕಾರಿ ನೌಕರ ಸಂಘದ ಕಾರ್ಯದರ್ಶಿ ರವಿಕುಮಾರ್, ಶಿಕ್ಷಕರಾದ ಕಿರಣ್, ನಂಜುಂಡಸ್ವಾಮಿ, ಶಿವಲಂಕಾರ್, ಪ್ರಕಾಶ್, ಪ್ರಮೋದ್ ಚಂದ್ರನ್, ಸೇರಿದಂತೆ ವಿವಿಧ ಶಾಲೆಗಳಿಂದ ಬಂದಿದ್ದ ಶಿಕ್ಷಕರು, ಪಾಲಕರು, ವಿದ್ಯಾರ್ಥಿಗಳು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net