ರೈತ ಹೋರಾಟ ಮುಂದುವರಿಕೆ ಅನಿವಾರ್ಯ

ಗುಂಡ್ಲುಪೇಟೆ ತಾಲೂಕಿನ ಆಲತ್ತೂರಿನಲ್ಲಿ ನಡೆದ ರೈತ ಸಂಘಟನೆ ಗ್ರಾಮ ಘಟಕ ಉದ್ಘಾಟನಾ ಸಮಾರಂಭದಲ್ಲಿ ಬಡಗಲಪುರ ನಾಗೇಂದ್ರ ಮಾತನಾಡಿದರು. ಸಿದ್ದರಾಜು, ಯಶವಂತ್, ಮಹದೇವಪ್ಪ ಇತರರು ಇದ್ದರು.
ಗುಂಡ್ಲುಪೇಟೆ ತಾಲೂಕಿನ ಆಲತ್ತೂರಿನಲ್ಲಿ ನಡೆದ ರೈತ ಸಂಘಟನೆ ಗ್ರಾಮ ಘಟಕ ಉದ್ಘಾಟನಾ ಸಮಾರಂಭದಲ್ಲಿ ಬಡಗಲಪುರ ನಾಗೇಂದ್ರ ಮಾತನಾಡಿದರು. ಸಿದ್ದರಾಜು, ಯಶವಂತ್, ಮಹದೇವಪ್ಪ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • farmer's struggle
ಗುಂಡ್ಲುಪೇಟೆ: ಆಳುವ ಸರ್ಕಾರಗಳು ನಿರಂತರವಾಗಿ ರೈತ ವಿರೋಧಿ ನೀತಿಗಳನ್ನು ಜಾರಿ ಮಾಡುತ್ತಿರುವ ಕಾರಣ ರೈತ ಸಂಘಟನೆ ಸಂಘಟಿತ ಹೋರಾಟ ಮುಂದುವರೆಸಬೇಕಾದ ಅನಿವಾರ್ಯತೆ ಇದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.
ತಾಲೂಕಿನ ಆಲತ್ತೂರು ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಗ್ರಾಮ ಘಟಕವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ರೈತ ಸಂಘಟನೆ ಗ್ರಾಮ ಘಟಕಗಳು ಸ್ಥಳೀಯ ಸಮಸ್ಯೆಗಳ ವಿರುದ್ಧ ಹೋರಾಟ ನಡೆಸುವ ವಿಷಯದಲ್ಲಿ ಹಿಂಜರಿಯುವುದು ಬೇಡ. ಇಂದು ರೈತ ಸಂಘಟನೆ ಕಾಡಂಚಿನ ಗ್ರಾಮಗಳನ್ನು ಮುಟ್ಟಿದೆ. ಈ ದಿನ ಆಲತ್ತೂರು ಗ್ರಾಮದ ರೈತರು ಸಂಘಟನೆಯ ಗ್ರಾಮ ಘಟಕ ಸ್ಥಾಪನೆ ಮಾಡಿರುವುದು ಉತ್ತಮ ಬೆಳವಣಿಗೆ. ಗ್ರಾಮದಲ್ಲಿ ಸಾಕಷ್ಟು ಸಮಸ್ಯೆಗಳಿರುವ ಬಗ್ಗೆ ತಿಳಿದಿದ್ದು, ಈಗಿನಿಂದಲೇ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸಂಘಟನೆ ವಿಭಾಗಿಯ ಕಾರ್ಯದರ್ಶಿ ಜ್ಯೋತಿಗೌಡನಪುರ ಸಿದ್ದರಾಜು, ಯುವ ಘಟಕದ ರಾಜ್ಯ ಸಂಚಾಲಕ ಯಶವಂತ್, ಜಿಲ್ಲಾಧ್ಯಕ್ಷ ಶಿವಪುರ ಮಹದೇವಪ್ಪ, ಪ್ರಧಾನ ಕಾರ್ಯದರ್ಶಿ ಭಾಸ್ಕರ್, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಬಸಮ್ಮ, ಗೌರವಾಧ್ಯಕ್ಷ ರಾಜಶೇಖರ್, ನಾಗರಾಜಪ್ಪ ಕುಮಾರ್, ಪ್ರಕಾಶ್, ಮಹೇಶ, ಗುರು, ಶಿವಕುಮಾರ್, ಮೂರ್ತಿ, ಯುವ ಘಟಕದ ತಾಲೂಕು ಅಧ್ಯಕ್ಷ ಪ್ರವೀಣ್ ಆಲತ್ತೂರು, ಗ್ರಾಮ ಘಟಕದ ಮಹದೇವ್ ಕುಮಾರ್, ರೋಹನ್‌ಗೌಡ ಮತ್ತು ರೈತ ಮುಖಂಡರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net