ರೈತರ ಮಿತ್ರ ಹಾವುಗಳ ಸಂರಕ್ಷಣೆ ಅಗತ್ಯ

ತಾಲೂಕಿನ ತಿಮ್ಮರಾಜಿಪುರ ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಶನಿವಾರ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶ ಚಾಮರಾಜನಗರ ಕೊಳ್ಳೇಗಾಲ ವನ್ಯಜೀವಿ ವಲಯ ಆಯೋಜಿಸಿದ್ದ ಹಾವುಗಳ ಜಾಗೃತಿ ಕಾರ್ಯಕ್ರಮ ಸ್ನೇಕ್ ಮಹೇಶ್ ಮಕ್ಕಳಿಗೆ ಹಾವುಗಳ ಬಗ್ಗೆ ಮಾಹಿತಿ ನೀಡಿದರು.
ತಾಲೂಕಿನ ತಿಮ್ಮರಾಜಿಪುರ ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಶನಿವಾರ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶ ಚಾಮರಾಜನಗರ ಕೊಳ್ಳೇಗಾಲ ವನ್ಯಜೀವಿ ವಲಯ ಆಯೋಜಿಸಿದ್ದ ಹಾವುಗಳ ಜಾಗೃತಿ ಕಾರ್ಯಕ್ರಮ ಸ್ನೇಕ್ ಮಹೇಶ್ ಮಕ್ಕಳಿಗೆ ಹಾವುಗಳ ಬಗ್ಗೆ ಮಾಹಿತಿ ನೀಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಉರಗ ತಜ್ಞ ಸ್ನೇಕ್ ಮಹೇಶ್ ಹೇಳಿಕೆ
  • ಜಾಗೃತಿ ಕಾರ್ಯಕ್ರಮ
ಕೊಳ್ಳೇಗಾಲ: ಹಾವುಗಳು ರೈತರ ಮಿತ್ರರಾಗಿದ್ದು, ಅವುಗಳ ಸಂರಕ್ಷಣೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಸ್ನೇಕ್ ಮಹೇಶ್ ಹೇಳಿದರು.
ತಾಲೂಕಿನ ತಿಮ್ಮರಾಜಿಪುರ ಗ್ರಾಮದಲ್ಲಿರುವ ಮುರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಶನಿವಾರ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶ ಚಾಮರಾಜನಗರ ಕೊಳ್ಳೇಗಾಲ ವನ್ಯಜೀವಿ ವಲಯ ಆಯೋಜಿಸಿದ್ದ ಹಾವುಗಳ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪರಿಸರ ಸಮತೋಲನದಲ್ಲಿ ಹಾವುಗಳ ಪಾತ್ರ ಬಹುಮುಖ್ಯವಾಗಿದ್ದು, ಇಲಿಗಳು ಹಾವುಗಳ ಆಹಾರವಾಗಿದೆ. ರೈತರ ಬೆಳೆಯನ್ನು ಇಲಿಗಳು ತಿಂದು ನಾಶಪಡಿಸುವುದನ್ನು ತಪ್ಪಿಸುತ್ತದೆ. ಎಲ್ಲ ಹಾವುಗಳು ವಿಷಪೂರಿತವಾಗಿಲ್ಲ. ನಾಗರಹಾವು, ಮಂಡಲದ ಹಾವು ಮತ್ತು ಕಟ್ಟಹಾವು ವಿಷದಿಂದ ಕೂಡಿದ್ದು ಅವುಗಳ ಬಗ್ಗೆ ಜ್ಞಾನ ಹೊಂದಬೇಕು. ಹಾವು ಕಡಿತಕ್ಕೆ ಕೈಗೊಳ್ಳಬೇಕಾದ ಮುಂಜಾಗ್ರತ ಕ್ರಮಗಳ ಬಗ್ಗೆ ಹಾಗೂ ಹಾವು ಕಡಿತಕ್ಕೆ ಒಳಗಾದ ಸಂದರ್ಭಗಳಲ್ಲಿ ಸಾಧ್ಯವಾದಷ್ಟು ಬೇಗ ಸಮೀಪದ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುವಂತೆ ತಿಳಿಸಿದರು.
ಹಾವುಗಳಿಗೆ ಹೊರಭಾಗದಲ್ಲಿ ಕಿವಿಯಿಲ್ಲ. ಒಳಭಾಗದ ಕಿವಿಗಳಿದ್ದು, ಕಂಪನದಿಂದ ಮಾತ್ರ ಗ್ರಹಿಕೆಯು ಅನುಭವಕ್ಕೆ ಬರುತ್ತದೆ ಹೊರತು ಎಷ್ಟೇ ಶಬ್ದ ಮಾಡಿದರೂ ಅದಕ್ಕೆ ಕೇಳಿಸುವುದಿಲ್ಲ. ಪುಂಗಿಯ ಶಬ್ದಕ್ಕೆ ಹುತ್ತದಿಂದ ಹೊರಕ್ಕೆ ಬರುವುದು ಮತ್ತು ನೃತ್ಯ ಮಾಡುವುದು , 5 ಹೆಡೆ ಮತ್ತು 7 ಹೆಡೆ ಹಾವು, ಹಾವಿನ ದ್ವೇಷ ಹನ್ನೆರಡು ವರ್ಷ ಇವೆಲ್ಲ ಸುಳ್ಳು ಎಂದು ತಿಳಿಸಿದರು.
ಈ ವೇಳೆ ವಿದ್ಯಾರ್ಥಿಗಳು ಹಾವುಗಳ ಜೀವನ ಶೈಲಿ, ಹಾವುಗಳ ಬಗ್ಗೆ ಇರುವ ಮೂಡನಂಬಿಕೆ ಇತರೆ ಹಲವಾರು ಪ್ರಶ್ನೆಗಳನ್ನು ಕೇಳಿ ವಿವರವಾದ ಮಾಹಿತಿಯನ್ನು ಪಡೆದುಕೊಂಡರು.
ಬಳಿಕ ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆ, ಮಾನವ ವನ್ಯಜೀವಿ ಸಂಘರ್ಷ ಹಾಗೂ ಕಾಳ್ಗಿಚ್ಚು ನಿಯಂತ್ರಣದ ಬಗ್ಗೆ ಉಪವಲಯ ಅಧಿಕಾರಿ ಅನಂತರಾಮು ಮಾಹಿತಿ ನೀಡಿದರು.
ಸನ್ಮಾನ: ಸ್ನೇಕ್ ಮಹೇಶ್ ಅವರನ್ನು ಅರಣ್ಯ ಇಲಾಖೆ ಮತ್ತು ಶಾಲೆ ವತಿಯಿಂದ ಸನ್ಮಾನಿಸಲಾಯಿತು. ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲ ಶೋಯಬ್ ಪಾಷಾ, ನಿಲಯ ಪಾಲಕ ಶಿವಾನಂದಯ್ಯ, ದೀಪಾ, ಶಾಲಾ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಎಲ್ಲಪ್ಪ ಗಡಗೇನವರ, ನಮಿತಾ ತಿಮ್ಮಪ್ಪ ಮಡಿವಾಳ, ಸುನಿಲ್ ಬಸಪ್ಪ ಬೆಳವಿ, ಎಸ್.ರಾಜು, ಶಿವಮ್ಮ, ಆಕಾಶ್ ಸೋಪನಾ ಜೋಶಿ, ಮುಕುಂದ , ಗೋವಿಂದ ಮತ್ತಿ ತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net