ಚಾಮರಾಜನಗರ ತಾಲೂಕಿನ ದೊಡ್ಡರಾಯಪೇಟೆ ಗ್ರಾಮದಲ್ಲಿ ಪೂರ್ಣಗೊಂಡಿರುವ ಜೆಜೆಎಂ ಯೋಜನೆಯನ್ನು ಗ್ರಾಪಂಗೆ ಹಸ್ತಾಂತರಿಸಲಾಯಿತು. ಗಗನಾ, ಸಿದ್ದರಾಜು, ಜಗದೀಶ್, ಪುರುಷೋತ್ತಮ್, ಆಶಾ, ರೇಣುಕಾ, ಜೋಸ್ೆ, ನಾಗೇಂದ್ರ ಮತ್ತು ಇತರರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ದೊಡ್ಡರಾಯಪೇಟೆ ಗ್ರಾಮ ಪಂಚಾಯಿತಿಯಲ್ಲಿ ಮುಗಿದ ಕಾಮಗಾರಿ
ಕುಡಿಯುವ ನೀರಿನ ಸೌಲಭ್ಯ ಒದಗಿಸುವ ಯೋಜನೆ
ಜಲ ಜೀವನ್ ಮಿಷನ್ ಯೋಜನೆ ಕಾಮಗಾರಿ ಹಸ್ತಾಂತರ
ಚಾಮರಾಜನಗರ : ತಾಲೂಕಿನ ಕೂಡ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ದೊಡ್ಡರಾಯಪೇಟೆ ಗ್ರಾಮದಲ್ಲಿ ಜಲ ಜೀವನ್ ಮಿಷನ್ ಯೋಜನೆ ಪೂರ್ಣಗೊಂಡಿದ್ದು, ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಯೋಜನೆಯನ್ನು ಹಸ್ತಾಂತರಿಸಲಾಯಿತು.
ಗ್ರಾಮದಲ್ಲಿ ಜೆಜೆಎಂ ಯೋಜನೆಯನ್ನು ಅನುಷ್ಠಾನಕ್ಕೆ ಸಿದ್ದವಾಗಿದ್ದು, ಕಾಮಗಾರಿಗಳು ಸಂಪೂರ್ಣವಾಗಿ ಮುಗಿದಿದ್ದು, ಮನೆ ಮನೆಗೆ ನೀರು ಸರಬರಾಜು ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಜೆಜೆಎಂ ಇಂಜನೀಯರ್ ಜಗದೀಶ್ ರವರು ಕೂಡ್ಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಗನ ಮತ್ತು ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಸಿದ್ದರಾಜುಗೆ ಹಸ್ತಾಂತರಿಸಿದರು.
ಇಂಜನೀಯರ್‌ಗಳಾದ ಪುರುಷೋತ್ತಮ್, ಆಶಾ, ಮಾಜಿ ಗ್ರಾಮ ಪಂಚಾಯಿಯಿತಿ ಅಧ್ಯಕ್ಷೆ ಹಾಗೂ ಹಾಲಿ ಸದಸ್ಯೆ ರೇಣುಕಾ, ಮಾಜಿ, ಸದಸ್ಯ ನಾಗೇಂದ್ರ, ನೀರುಗಂಟಿ ಎಚ್.ಮಹೇಶ್ ಮತ್ತು ಇತರರು ಉಪಸ್ಥಿತರಿದ್ದರು.