ಮೃತ ವಾಚರ್ ಕುಟುಂಬಕ್ಕೆ ಪರಿಹಾರ ವಿತರಣೆ

ಕಾಡಾನೆ ದಾಳಿಯಿಂದ ಮೃತಪಟ್ಟ ವಾಚರ್ ಮಹದೇವಸ್ವಾಮಿ ಕುಟುಂಬಕ್ಕೆ ಅರಣ್ಯ ಇಲಾಖೆಯಿಂದ ಪರಿಹಾರವಾಗಿ 5 ಲಕ್ಷ ರೂ.ಚೆಕ್ ನೀಡಲಾಯಿತು. ಡಾ.ಎಂ ಮಾಲತಿ ಪ್ರಿಯಾ, ವಿರಾಜ್ ಹೊಸೂರ್, ರವಿ ಇದ್ದರು.
ಕಾಡಾನೆ ದಾಳಿಯಿಂದ ಮೃತಪಟ್ಟ ವಾಚರ್ ಮಹದೇವಸ್ವಾಮಿ ಕುಟುಂಬಕ್ಕೆ ಅರಣ್ಯ ಇಲಾಖೆಯಿಂದ ಪರಿಹಾರವಾಗಿ 5 ಲಕ್ಷ ರೂ.ಚೆಕ್ ನೀಡಲಾಯಿತು. ಡಾ.ಎಂ ಮಾಲತಿ ಪ್ರಿಯಾ, ವಿರಾಜ್ ಹೊಸೂರ್, ರವಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ತಾತ್ಕಾಲಿಕವಾಗಿ 5 ಲಕ್ಷ ರೂ.ಚೆಕ್ ನೀಡಿದ ಸಿಸಿಎಫ್

ಹನೂರು:

ಕಾಡಾನೆ ದಾಳಿಯಿಂದ ಇತ್ತೀಚೆಗೆ ಮೃತಪಟ್ಟ ತಾಲೂಕಿನ ಮಲೆಮಹದೇಶ್ವರ ಬೆಟ್ಟ ಸಮೀಪದ ಹುಲಿಗೂಡು ಗ್ರಾಮದ ವಾಚರ್ ಮಹದೇವಸ್ವಾಮಿ ಕುಟುಂಬಕ್ಕೆ ಸೋಮವಾರ ಅರಣ್ಯ ಇಲಾಖೆಯಿಂದ ತಾತ್ಕಾಲಿಕ ಪರಿಹಾರವಾಗಿ 5 ಲಕ್ಷ ರೂ.ಚೆಕ್ ವಿತರಿಸಲಾಯಿತು.

ಸಿಸಿಎಫ್ ಡಾ.ಎಂ ಮಾಲತಿ ಪ್ರಿಯಾ ಮಾತನಾಡಿ, ವಾಚರ್ ಮಹದೇವಸ್ವಾಮಿ 10 ವರ್ಷದಿಂದಲೂ ಅರಣ್ಯ ಇಲಾಖೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರು. ಸಾವು ಅತ್ಯಂತ ನೋವಿನ ಸಂಗತಿ. ತಾತ್ಕಾಲಿಕ ಪರಿಹಾರವಾಗಿ 5 ಲಕ್ಷ ರೂ. ನೀಡಲಾಗುತ್ತಿದೆ. ಉಳಿದಂತೆ ಸರ್ಕಾರದಿಂದ 25 ಲಕ್ಷ ರೂ.ಪರಿಹಾರ ಕೊಡಿಸಲಾಗುವುದು. ಜತೆಗೆ ಮೃತರ ಪತ್ನಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಿಸುವ ಸಿಬ್ಬಂದಿ ಪ್ರಾಣವೂ ಮುಖ್ಯ. ಹಾಗಾಗಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಗಸ್ತು ತಿರುಗುವ ವೇಳೆ ಜಾಗರೂಕತೆಯಿಂದ ಇರಬೇಕು ಎಂದರು.
ಎಸಿಎಫ್ ವಿರಾಜ್ ಹೊಸೂರ್, ಆರ್‌ಎಫ್‌ಒ ರವಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net