ತೆಂಗು, ಮಾವಿನ ಮರಗಳು ನಾಶ

ಅಸ್ತೂರು ಗ್ರಾಮದ ಜಮೀನೊಂದರಲ್ಲಿ ಕಾಡಾನೆಗಳು ಅಡಿಕೆ, ತೆಂಗಿನ ಮರಗಳನ್ನು ನಾಶಪಡಿಸಿರುವುದು.
ಅಸ್ತೂರು ಗ್ರಾಮದ ಜಮೀನೊಂದರಲ್ಲಿ ಕಾಡಾನೆಗಳು ಅಡಿಕೆ, ತೆಂಗಿನ ಮರಗಳನ್ನು ನಾಶಪಡಿಸಿರುವುದು.
Published on
ಹನೂರು: ತಾಲೂಕಿನ ಪೊನ್ನಾಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಸ್ತೂರು ಗ್ರಾಮದ ಜಮೀನೊಂದಕ್ಕೆ ಶುಕ್ರವಾರ ರಾತ್ರಿ ಕಾಡಾನೆಗಳು ನುಗ್ಗಿ ಅಡಿಕೆ, ತೆಂಗು ಹಾಗೂ ಮಾವಿನ ಮರಗಳನ್ನು ನಾಶ ಮಾಡಿವೆ.
ಗ್ರಾಮದ ಕೋಟೆ ಬಸಪ್ಪ ಅವರು ಗ್ರಾಮದ ಹೊರವಲಯದಲ್ಲಿ ಜಮೀನು ಹೊಂದಿದ್ದು, ಬಾಳೆ ಬೆಳೆದಿದ್ದರು. ಜತೆಗೆ ಫಲ ನೀಡುತ್ತಿದ್ದ ಮಾವು, ತೆಂಗು ಹಾಗೂ ಅಡಿಕೆ ಮರಗಳನ್ನೂ ಬೆಳೆಸಿದ್ದರು. ಈ ನಡುವೆ ಸಮೀಪದ ಅರಣ್ಯ ಪ್ರದೇಶದಿಂದ ಆಗಮಿಸಿದ ಕಾಡಾನೆಗಳ ಹಿಂಡು ಜಮೀನಿಗೆ ಲಗ್ಗೆ ಇಟ್ಟು ಮಾವು, ತೆಂಗು ಹಾಗೂ ಅಡಿಕೆ ಮರಗಳನ್ನು ನಾಶಪಡಿಸಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net