ಒಂಟಿ ಸಲಗದ ಫೋಟೋ ಕ್ಲಿಕ್ಕಿಸಿ ಸಂತ

ಯಳಂದೂರು ತಾಲೂಕಿನ ಬಿಆರ್‌ಟಿ ಅರಣ್ಯ ಬದಿಯ ರಸ್ತೆಯಲ್ಲಿ ವಾಹನ ನಿಲ್ಲಿಸಿ ಆನೆ ಫೋಟೋವನ್ನು  ಕ್ಲಿಕ್ಕಿಸಿಕೊಳ್ಳುತ್ತಿರುವ ಪ್ರವಾಸಿಗರು.
ಯಳಂದೂರು ತಾಲೂಕಿನ ಬಿಆರ್‌ಟಿ ಅರಣ್ಯ ಬದಿಯ ರಸ್ತೆಯಲ್ಲಿ ವಾಹನ ನಿಲ್ಲಿಸಿ ಆನೆ ಫೋಟೋವನ್ನು ಕ್ಲಿಕ್ಕಿಸಿಕೊಳ್ಳುತ್ತಿರುವ ಪ್ರವಾಸಿಗರು.
Published on

ಯಳಂದೂರು: ತಾಲೂಕಿನ ಬಿಆರ್‌ಟಿ ಅರಣ್ಯ ಬದಿಯ ಕೆರೆಯಲ್ಲಿ ಒಂಟಿ ಸಲಗ ನೀರು ಕುಡಿಯಲು ಬಂದಾಗ ಪ್ರವಾಸಿಗರು ವಾಹನ ನಿಲ್ಲಿಸಿ ಫೋಟೋ ತೆಗೆದು ಸಂತಸ ಪಟ್ಟರು.

ಬಿಆರ್‌ಟಿ (ಬಿಳಿಗಿರಿರಂಗನ ಬೆಟ್ಟ) ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಗುಂಬಳ್ಳಿ ಚೆಕ್‌ಪೋಸ್ಟ್ ಮೂಲಕ ಪುರಾಣಿ ಪೋಡಿನ ಚೈನ್ ಗೇಟ್ ಸಮೀಪದ ಎರಕಟ್ಟೆಯ ಬಳಿಯ ಕೆರೆಯಲ್ಲಿ ಭಾನುವಾರ ಒಂಟಿ ಸಲಗ ನೀರು ಕುಡಿದು ಮೈಗೆ ಎರಚಿಕೊಳ್ಳುತ್ತಿತ್ತು. ಇದನ್ನು ಕಂಡು ಕಾರು ಹಾಗೂ ಬೈಕ್‌ಗಳಲ್ಲಿ ತೆರಳುತ್ತಿದ್ದ ಪ್ರವಾಸಿಗರು ಏಕಾಏಕಿ ರಸ್ತೆ ಬದಿ ವಾಹನ ನಿಲ್ಲಿಸಿ, ಕೆರೆ ಸಮೀಪಕ್ಕೆ ತೆರಳಿ ಮೊಬೈಲ್‌ನಲ್ಲಿ ಫೋಟೋ, ವಿಡಿಯೋ ಚಿತ್ರೀಕರಣದಲ್ಲಿ ತೊಡಗಿದ್ದರು.
ಕೆಲವರು ಕೆರೆ ಏರಿ ಪ್ರವೇಶದವರೆಗೂ ಹೋಗಿ ಫೋಟೋಗೆ ಪೋಸ್ ನೀಡಿದರು. 15 ನಿಮಿಷ ಆನೆ ಕೆರೆಯಲ್ಲೇ ಇದ್ದು ನಂತರ ಅರಣ್ಯದೊಳಗೆ ತೆರಳಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net