ಪಾದಚಾರಿ ಮಾರ್ಗದಲ್ಲಿ ಅಳವಡಿಸಿದ್ದ ಅಂಗಡಿಗಳ ಜಾಹೀರಾತು ಫಲಕಗಳು, ಪಟ್ಟಣದ ಗಾಂಧಿ ಸರ್ಕಲ್‌ನಲ್ಲಿದ್ದ ತಳ್ಳುವ ಗಾಡಿಗಳು, ಹೂ, ಹಣ್ಣಿನ ಅಂಗಡಿ, ತಳ್ಳುವ ಗಾಡಿಯ ಹೋಟೆಲ್‌ಗಳನ್ನು ತೆರವುಗೊಳಿಸಲಾಯಿತು. ಕೆಲವರು ಸ್ವಯಂ ಪ್ರೇರಿತರಾಗಿ ಅಂಗಡಿಗಳನ್ನು ತೆರವು ಮಾಡಿಕೊಟ್ಟರು. ಪಟ್ಟಣದ ಕೆ.ಕೆ.ರಸ್ತೆ, ದೊಡ್ಡ ಅಂಗಡಿ ಬೀದಿ, ಬಳೆಪೇಟೆಗೂ ತೆರಳಿದ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಜೆಸಿಬಿ ಹಾಗೂ ಪೌರಕಾರ್ಮಿಕ ಸಿಬ್ಬಂದಿಯಿಂದ ತೆರವು ಮಾಡಿಸಿದರು.